ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡಬದಿಯಲ್ಲಿ ಸಾಗುವವರು...

Last Updated 28 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

‘ಹೆದ್ದಾರಿಯಲ್ಲಿ ಸಾಗುವ ಹೆಚ್ಚಿನ ಲಾರಿಗಳು ಬಲಭಾಗದಲ್ಲಿ ಸಂಚರಿಸುತ್ತವೆ. ಇದರಿಂದ, ಅವುಗಳನ್ನು ಹಿಂದೆ ಹಾಕಿ ಮುಂದೆ ಹೋಗಲು ಅನಿವಾರ್ಯವಾಗಿ ಎಡಗಡೆಯಿಂದ ಮುನ್ನುಗ್ಗಬೇಕಾಗುತ್ತದೆ. ಇಂತಹ ಕಾರಣದಿಂದ ಅಪಘಾತ ಆಗುತ್ತದೆ’ ಎಂದು ಡಾ. ಈಶ್ವರ ಶಾಸ್ತ್ರಿ ಮೋಟಿನಸರ ಹೇಳಿದ್ದಾರೆ (ವಾ.ವಾ., ಫೆ. 19). ಆದರೆ ಹೆದ್ದಾರಿಯಲ್ಲಿ ವಾಹನಗಳು ರಸ್ತೆಯ ಎಡಭಾಗದಲ್ಲಿ ಪಾದಚಾರಿಗಳು ಹಾಗೂ ದ್ವಿಚಕ್ರವಾಹನಗಳಿಗೆ ಜಾಗ ಬಿಟ್ಟುಕೊಟ್ಟು ಬಲಭಾಗದಲ್ಲಿ ಸಂಚರಿಸುತ್ತವೆ. ಇದು ದ್ವಿಚಕ್ರವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸುರಕ್ಷಿತ ಕೂಡ. ಆದರೆ ಲಾರಿಯನ್ನು ಹಿಂದಿಕ್ಕುವವರು ತಾಳ್ಮೆಯಿಂದ ಎಡಕ್ಕೆ ಬಂದು, ಅಲ್ಲಿ ಪಾದಚಾರಿಗಳಾಗಲೀ ವಾಹನಗಳಾಗಲೀ ಇಲ್ಲ ಎಂಬುದನ್ನು ಖಾತರಿಪಡಿಸಿಕೊಂಡು ಓವರ್‌ಟೇಕ್‌ ಮಾಡಿದರೆ ಯಾವ ಅಪಘಾತವೂ ಆಗುವುದಿಲ್ಲ. ಆದರೆ ಮೋಜು ಮಸ್ತಿ ಮಾಡುವ ಯುವಜನಾಂಗದಿಂದ ಇಂತಹ ತಾಳ್ಮೆಯನ್ನು ನಿರೀಕ್ಷಿಸುವಂತಿಲ್ಲ.

-ಮುಳ್ಳೂರು ಪ್ರಕಾಶ್‌,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT