ಪ್ರಚಾರಪ್ರಿಯತೆ

7

ಪ್ರಚಾರಪ್ರಿಯತೆ

Published:
Updated:

‘ಕುವೆಂಪು ಮೂಲ ಜೈನ, ಭೈರಪ್ಪ ವೈದಿಕ ಬ್ರಾಹ್ಮಣರಲ್ಲ’ (ಪ್ರ.ವಾ., ಆ. 24).

ಇವು ಬಂಜಗೆರೆ ಜಯಪ್ರಕಾಶ್ ಉದುರಿಸಿರುವ ಆಣಿಮುತ್ತುಗಳು! ಅವರ ಈ ’ಸಂಶೋಧನೆ’ ಯಾವ ಪುರುಷಾರ್ಥಕ್ಕಾಗಿ? ಕುವೆಂಪು ಮತ್ತು ಭೈರಪ್ಪನವರ ಜಾತಿಯನ್ನು ಕಟ್ಟಿಕೊಂಡು ಯಾರಿಗೆ ಏನಾಗಬೇಕಾಗಿದೆ? (ವಸ್ತುತಃ ತಮ್ಮ ಮನೆತನದ ಜೈನ ಮೂಲವನ್ನು ಕುವೆಂಪು ಅವರೆ ತಮ್ಮ ಆತ್ಮಕಥೆಯಲ್ಲಿ ಹೇಳಿಕೊಂಡಿದ್ದಾರೆ). ‘ಅನಿಕೇತನ’ ಸ್ಥಿತಿ ಆದರ್ಶವಾಗಬೇಕಾದ ಸಂದರ್ಭದಲ್ಲಿ ಜಾತಿಯ ಮಾತು ಅರ್ಥವಿರದ ‘ಸೂತಕ’ ಮಾತ್ರ!

ಅಂದಹಾಗೆ, ಹಿಂದೆ ಬಂಜಗೆರೆಯವರು ಬಸವಣ್ಣನವರ ಬಗೆಗೆ ಏನೋ ಅಬದ್ಧವನ್ನು ಬಳಿದು, ವಿವಾದ ಸೃಷ್ಟಿಸಿದ್ದರಲ್ಲವೆ? ಇಂಥ ಉಪದ್ವ್ಯಾಪಗಳಿಗೆ ಪ್ರಚಾರಪ್ರಿಯತೆಯಷ್ಟೆ ಕಾರಣ!

ಗಾದೆಯೊಂದು ನೆನಪಾಗುತ್ತದೆ: ’ಕೆಲಸವಿಲ್ಲದ ಬಡಗಿ ಮಕ್ಕಳ ಕುಂಡೆ ಕೆತ್ತಿದ!’

-ಸಿ.ಪಿ.ಕೆ., ಮೈಸೂರು

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !