ಗುರುವಾರ , ಫೆಬ್ರವರಿ 27, 2020
19 °C

ಮನಕಲಕುವ ಸಂಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ಅವೆನ್ಯೂ ರಸ್ತೆಯ ಜನದಟ್ಟಣೆಯಲ್ಲಿ 3 ಮತ್ತು 4 ವರ್ಷದ ಮಕ್ಕಳಿಬ್ಬರನ್ನು ಬಿಟ್ಟು ಪೋಷಕರು ನಾಪತ್ತೆಯಾದ ವಿಷಯ ವರದಿಯಾಗಿದೆ (ಪ್ರ.ವಾ., ಜ. 13).ಇದೊಂದು ಮನಕಲಕುವ ಸಂಗತಿ. ಕೆಲವು ಮಕ್ಕಳು ವಯಸ್ಸಾದ ಪೋಷಕರನ್ನು ಸಾಕುವ ಹೊಣೆಯಿಂದ ತಪ್ಪಿಸಿಕೊಳ್ಳಲು, ಜನಸಂದಣಿ ಇರುವೆಡೆ ಅವರನ್ನು ಬಿಟ್ಟು ಬರುವ ಅಮಾನವೀಯ ಸಂಗತಿಗಳು ಆಗಾಗ್ಗೆ ವರದಿ ಯಾಗುವುದುಂಟು. ಆದರೆ, ಎಷ್ಟೇ ಬಡತನವಿದ್ದರೂಮಕ್ಕಳ ಪೋಷಣೆಯ ಜವಾಬ್ದಾರಿಯಿಂದ ತಪ್ಪಿಸಿ
ಕೊಳ್ಳುವ ಪೋಷಕರು ಇಲ್ಲ ಅಥವಾ ಅಪರೂಪ. ತಮಿಳುನಾಡಿನ ಸೇಲಂನಲ್ಲಿ ಮಹಿಳೆಯೊಬ್ಬರು ಮಕ್ಕಳ ಹಸಿವನ್ನು ಹೋಗಲಾಡಿಸಲು ತಮ್ಮ ತಲೆಯ ಕೂದಲನ್ನೇ ಕತ್ತರಿಸಿ ಮಾರಿದ ಸಂಗತಿ ಇತ್ತೀಚೆಗೆ ವರದಿಯಾಗಿತ್ತು. ಹೀಗಿರುವಾಗ, ಈ ಮಕ್ಕಳನ್ನು ಪೋಷಕರು ಜನಜಂಗುಳಿ
ಯಲ್ಲಿ ನಿಲ್ಲಿಸಿ ನಾಪತ್ತೆಯಾದುದು ಅತ್ಯಂತ ಅಮಾನವೀಯ.

ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)