ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟ... ಹೋರಾಟ

Last Updated 4 ಜುಲೈ 2018, 17:14 IST
ಅಕ್ಷರ ಗಾತ್ರ

'ರಾಜಕೀಯದಲ್ಲಿ ಹೆಣ್ಣು ಅಳಿವಿನಂಚಿನ ಜೀವಿ' ಎಂದು ವಿಧಾನ ಪರಿಷತ್‌ ಸದಸ್ಯೆ ತೇಜಸ್ವಿನಿ ಸರಿಯಾಗಿ ಹೇಳಿದ್ದಾರೆ (ಪ್ರ.ವಾ., ಜುಲೈ 4). ರಾಜಕೀಯ ಮಾತ್ರವಲ್ಲ, ಸಾರ್ವಜನಿಕವಾಗಿಯೂ ಅವಳು ಅಳಿವಿನಂಚಿನ ಜೀವಿಯೇ. ಪುರುಷ ಪ್ರಧಾನ ಜಗತ್ತಿನಲ್ಲಿ ಮಹಿಳೆ ಏನಾದರೂ ಸಾಧಿಸಬೇಕೆಂದರೆ, ಸಮಾಜದಲ್ಲಿ ತನ್ನ ಛಾಪು ಮೂಡಿಸಬೇಕೆಂದರೆ ಮನೆಯಿಂದಲೇ ಅವಳ ಹೋರಾಟ ಪ್ರಾರಂಭ ಮಾಡಬೇಕಾದ ಪರಿಸ್ಥಿತಿ ಇರುವುದು ನಿಜ. ಸಾಮಾಜಿಕವಾಗಿ ತನಗೆ ಸಲ್ಲಬೇಕಾದ ಪ್ರತಿಯೊಂದನ್ನೂ ಹೋರಾಟ ಮಾಡಿಯೇ ಪಡೆಯಬೇಕಾಗಿರುವುದು ದುರದೃಷ್ಟಕರ.

ಅರ್ಧದಷ್ಟು ಮಹಿಳಾ ಮತದಾರರಿದ್ದರೂ ಸ್ಪರ್ಧಿಸಲು ಟಿಕೆಟ್‌ ದಕ್ಕಿದ್ದು ಕೆಲವೇ ಮಂದಿ ಮಹಿಳೆಯರಿಗೆ. ಇಪ್ಪತ್ತೊಂಬತ್ತು ಸಚಿವರಲ್ಲಿ ಒಬ್ಬರು ಮಾತ್ರ ಮಹಿಳೆ. ಅವರನ್ನು ಅವರ ಪಕ್ಷದವರೇ ಬೆಂಬಲಿಸುತ್ತಿಲ್ಲ. ಕಾರಣ ಹೆಣ್ಣು ಎಂಬುದು. ಇಂತಹ ಸಮಯದಲ್ಲಿ ಪಕ್ಷಭೇದ ಮರೆತು ತೇಜಸ್ವಿನಿ ಅವರು ಸಚಿವೆ ಜಯಮಾಲಾರನ್ನು ಬೆಂಬಲಿಸಿ, ಹುರಿದುಂಬಿಸಿದ ಪರಿ ಅನನ್ಯವಾಗಿತ್ತು.

-ವಿಶಾಲಾಕ್ಷಿ ಶರ್ಮಾ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT