ಪ್ರಾಮಾಣಿಕರು ವಿರಳ

7

ಪ್ರಾಮಾಣಿಕರು ವಿರಳ

Published:
Updated:

‘ನಿವೃತ್ತಿ ಘೋಷಿಸಬಾರದೇ’ (ವಾ.ವಾ., ಆ. 6) ಎಂಬ ಪತ್ರದಲ್ಲಿ ವಿ.ಜಿ. ಇನಾಮದಾರ ಅವರು ‘ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿರುವ ಸಿದ್ದರಾಮಯ್ಯ ಅವರು ಇತರ ಹಿರಿಯ ನಾಯಕರಿಗೆ ಮಾದರಿಯಾಗಬೇಕು’ ಎಂದಿದ್ದಾರೆ.

ವಾಸ್ತವವಾಗಿ 2013ರಲ್ಲಿ ಚಾಮುಂಡಿ ಕ್ಷೇತ್ರದಿಂದ ಸ್ಪರ್ಧಿಸಿ, ಶಾಸಕರಾಗಿ, ಮುಖ್ಯಮಂತ್ರಿಯೂ ಆಗಿದ್ದ ಸಿದ್ದರಾಮಯ್ಯ ಅವರು ಆನಂತರ, ‘ನಾನಿನ್ನು ಚುನಾವಣಾ ರಾಜಕಾರಣದಿಂದ ದೂರ ಉಳಿಯುತ್ತೇನೆ’ ಎಂದಿದ್ದರು. ಆದರೆ 2018ರ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು.

ಸಿದ್ದರಾಮಯ್ಯ ಇರಲಿ ಇನ್ಯಾವುದೇ ರಾಜಕಾರಣಿ ಇರಲಿ, ಅವರಾಡುವ ಮಾತುಗಳನ್ನು ನಂಬಬಾರದು. ಹಿಂದೆ ನಾಯಕರಾಗಿದ್ದ ಎಚ್‌.ಜಿ. ಗೋವಿಂದೇಗೌಡ (ಮಲೆನಾಡ ಗಾಂಧಿ), ಎಂ.ವೈ. ಘೋರ್ಪಡೆ, ನಜೀರ್‌ಸಾಬ್‌ ಅವರಂಥ ಮುತ್ಸದ್ದಿಗಳು ಈಗಿನ ರಾಜಕಾರಣದಲ್ಲಿ ವಿರಳ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !