ನ್ಯಾಯಾಧೀಶರನ್ನು ನೇಮಿಸಿ

7

ನ್ಯಾಯಾಧೀಶರನ್ನು ನೇಮಿಸಿ

Published:
Updated:

ಮೈಸೂರಿನ ಪ್ರಧಾನ ಎರಡನೇ ಸಿವಿಲ್ ಜಡ್ಜ್ ಹಾಗೂ ಜೆಎಂಎಫ್‌ಸಿ ಮತ್ತು ಹೆಚ್ಚುವರಿ ಎರಡನೇ ಸಿವಿಲ್ ಜಡ್ಜ್  ಹಾಗೂ ಜೆಎಂಎಫ್‌ ನ್ಯಾಯಾಲಯಗಳಲ್ಲಿರುವ ಪ್ರಕರಣಗಳು ಫ್ರಿಜ್‌ನಲ್ಲಿಟ್ಟ ತರಕಾರಿಗಳಂತಾಗಿವೆ. ಬೆಳೆಯುವುದೂ ಇಲ್ಲ, ಕೊಳೆಯುವುದೂ ಇಲ್ಲ! ಒಂಬತ್ತು ತಿಂಗಳಿಂದ ಇಲ್ಲಿ ನ್ಯಾಯಾಧೀಶರೇ ಇಲ್ಲದಿರುವುದು ಇದಕ್ಕೆ ಕಾರಣ.

ಈ ಎರಡೂ ನ್ಯಾಯಾಲಯಗಳಲ್ಲಿ ಸಾವಿರಾರು ಪ್ರಕರಣಗಳಿವೆ. ಈ ನ್ಯಾಯಾಲಯಗಳಿಗೆ ಸುಂದರ ನ್ಯಾಯಾಂಗಣಗಳಿವೆ, ಪೀಠೋಪಕರಣಗಳಿವೆ, ಶಿರಸ್ತೇದಾರರು, ಸಿಬ್ಬಂದಿ, ವಕೀಲರೂ ಸೇರಿ ಎಲ್ಲ ಅಗತ್ಯ ಸೌಲಭ್ಯಗಳೂ ಇವೆ. ನ್ಯಾಯಾಧೀಶರದ್ದೇ ಕೊರತೆ.

ಈ ನ್ಯಾಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ನ್ಯಾಯಾಧೀಶರು ವರ್ಗಾವಣೆಯಾಗಿ ಒಂಬತ್ತು ತಿಂಗಳಾಗಿದೆ. ಇದರಿಂದಾಗಿ ಇಲ್ಲಿ ಉಳಿಯುವ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರುತ್ತಿದೆ. ಈ ನ್ಯಾಯಾಲಯಗಳಿಗೆ ಆದಷ್ಟು ಬೇಗ ನ್ಯಾಯಾಧೀಶರನ್ನು ನೇಮಿಸಿ ಜನರಿಗೆ ನ್ಯಾಯ ಒದಗಿಸಬೇಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !