‘ಭಾಗ್ಯ’ಕ್ಕೇ ಎಲ್ಲ...

7

‘ಭಾಗ್ಯ’ಕ್ಕೇ ಎಲ್ಲ...

Published:
Updated:

‘ಸರ್ಕಾರಿ ಶಾಲೆಗೆ ಚಾವಣಿಯೇ ಇಲ್ಲ’ (ಪ್ರ.ವಾ., ಜುಲೈ 27) ಎಂಬ ಕೊರಟಗೆರೆ ತಾಲ್ಲೂಕು ಬಜ್ಜನಹಳ್ಳಿಯ ಸರ್ಕಾರಿ ಶಾಲೆಯ ಸ್ಥಿತಿಯನ್ನು ಕುರಿತ ವರದಿ ಓದಿ ಬಹಳ ದುಃಖವಾಯಿತು.

ಸರ್ಕಾರವು ಜನರ ತೆರಿಗೆಯ ಹಣವನ್ನು ಆ ಭಾಗ್ಯ– ಈ ಭಾಗ್ಯ ಎಂದು ಬೇಕು– ಬೇಡದ ಯೋಜನೆಗಳಿಗೆ ವೆಚ್ಚ ಮಾಡುತ್ತದೆ. ಆದರೆ ಹಳ್ಳಿಗಳ ಜನರ ಅಗತ್ಯಗಳಾದ ನೀರು, ಮನೆ, ಬೆಳಕನ್ನು ಕೊಡುವ ಯೋಜನೆಗಳು ಜಾರಿಯಾಗುತ್ತಿಲ್ಲ. ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ನಮ್ಮ ಸ್ಥಿತಿ ಸುಧಾರಣೆ ಆಗಿಲ್ಲ ಎಂಬುದು ಬೇಸರದ ವಿಚಾರ. ಪತ್ರಿಕೆಗಳು ಇಂಥ ವಿಚಾರಗಳನ್ನು ಎತ್ತಿ ತೋರಿಸಬೇಕು. ಸರ್ಕಾರ, ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು.

 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !