ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಅನ್ಯಜಾತಿಯ ಕನ್ಯೆಗೆ ಸಮ್ಮತಿ: ಉತ್ತಮ ಬೆಳವಣಿಗೆ

ಅಕ್ಷರ ಗಾತ್ರ

ಮೊನ್ನೆ ಸಂಜೆ ನಮ್ಮ ಮನೆಯ ಹತ್ತಿರದ ಪಾರ್ಕಿನಲ್ಲಿ ಹವಾ ಸೇವನೆಗೆಂದು ಹೋಗಿದ್ದಾಗ, ನವವಿವಾಹಿತೆಯೊಬ್ಬರು ಮಾತಿಗೆ ಸಿಕ್ಕರು. ತಮ್ಮ ತವರು ಮನೆ ಹಾವೇರಿ ಎಂದು ಹೇಳಿದ ಆ ಮಹಿಳೆ, ತಮ್ಮದು ಅಂತರ್ಜಾತಿ ವಿವಾಹ ಎಂದರು. ಬಹುಶಃ ಅವರದು ಪ್ರೇಮವಿವಾಹ ಇರಬಹುದು ಎಂದು ಅರ್ಥೈಸಿಕೊಂಡ ನಾನು, ಅದನ್ನು ಅವರಲ್ಲಿ ಕೇಳಿದಾಗ, ‘ಇಲ್ಲ ಮೇಡಂ, ನನ್ನ ಗಂಡನ ಮನೆಯವರು ಸುಮಾರು ಎರಡು ವರ್ಷಗಳಿಂದ ವಧುವಿನ ಅನ್ವೇಷಣೆಯಲ್ಲಿ ಇದ್ದರು. ತಮ್ಮ ಜಾತಿಯ ಹುಡುಗಿ ದೊರೆಯದೇ ಇದ್ದಾಗ ಅನ್ಯಜಾತಿಯ ಕನ್ಯೆಯನ್ನು ಮಗನಿಗೆ ತಂದುಕೊಳ್ಳಲು ನಿರ್ಧರಿಸಿದರಂತೆ. ಅದರಂತೆ ನಮ್ಮ ಮದುವೆ ನೆರವೇರಿತು’ ಎಂದು ಹೇಳಿದಾಗ ಖುಷಿಯಾಯಿತು.

ದೇಶದಲ್ಲಿ ಗಂಡುಮಕ್ಕಳ ಅನುಪಾತವು ಹೆಣ್ಣುಮಕ್ಕಳ ಅನುಪಾತಕ್ಕಿಂತ ಹೆಚ್ಚಾಗಿರುವುದರಿಂದ ವಿವಾಹಕ್ಕೆ ಕನ್ಯೆಯರು ದೊರಕುವುದೇ ಕಷ್ಟವಾಗುತ್ತಿದೆ (ಸ್ವಜಾತಿ ಅನುಸಾರ). ಹಾಗಾಗಿ ತಮ್ಮ ಮಗನಿಗೆ ಅನ್ಯಜಾತಿಯ ಹುಡುಗಿಯಾದರೂ ಪರವಾಗಿಲ್ಲ ಎಂಬ ಧೋರಣೆ ಇತ್ತೀಚೆಗೆ ಪೋಷಕರಲ್ಲಿ ಬರುತ್ತಿದೆ. ಬೇರೂರಿರುವ ಜಾತಿವ್ಯವಸ್ಥೆಗೆ ಈ ಕಾರಣದಿಂದಲಾದರೂ ಸ್ವಲ್ಪಮಟ್ಟಿಗೆ ಕಡಿವಾಣ ಬೀಳಬಹುದೇನೊ!

- ಟಿ.ಎಸ್.ಪ್ರತಿಭಾ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT