ಬುಧವಾರ, ಡಿಸೆಂಬರ್ 1, 2021
26 °C

ವಾಚಕರ ವಾಣಿ | ಮುಕ್ತ ಆಯ್ಕೆ: ಕುವೆಂಪು ವಿ.ವಿ ಹೊರತಾಗದಿರಲಿ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮುಕ್ತ ಆಯ್ಕೆಯ ಪತ್ರಿಕೆಯೊಂದು ಅಧ್ಯಯನಕ್ಕಿದ್ದು, ಇದರಲ್ಲಿ ವಿದ್ಯಾರ್ಥಿಗಳು ಬಯಸಿದಲ್ಲಿ ತಾವು ಓದುವ ನಿಕಾಯವನ್ನು ಬಿಟ್ಟು ಬೇರೆ ನಿಕಾಯದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಕಲಾ ವಿಭಾಗದ ವಿದ್ಯಾರ್ಥಿಗಳು ವಾಣಿಜ್ಯ ಅಥವಾ ವಿಜ್ಞಾನ ವಿಭಾಗದ ಒಂದು ವಿಷಯ ಆಯ್ದುಕೊಳ್ಳಬಹುದು ಅಥವಾ ಇಷ್ಟ ಇಲ್ಲದಿದ್ದಲ್ಲಿ ಕಲೆ, ವಿಜ್ಞಾನ ಮೊದಲಾದ ಬಹು ವಿಷಯಗಳಿರುವ ವಿಭಾಗದವರು ತಾವು ಓದುತ್ತಿರುವ ಎರಡು ವಿಷಯ ಬಿಟ್ಟು ಮೂರನೆಯದೊಂದು ವಿಷಯ ಆಯ್ಕೆ ಮಾಡಿಕೊಳ್ಳಬಹುದು.

ಇದನ್ನು ರಾಜ್ಯದ ಹಲವು ವಿಶ್ವವಿದ್ಯಾಲಯಗಳು ಅನುಸರಿಸಿ ಆದೇಶ ಹೊರಡಿಸಿವೆ. ಆದರೆ ಕುವೆಂಪು ವಿಶ್ವವಿದ್ಯಾಲಯವು ಈ ಆಯ್ಕೆಯನ್ನು ನಿರ್ಬಂಧಿಸಿ, ಕಲಾ ವಿಭಾಗದವರು ಕಡ್ಡಾಯವಾಗಿ ವಾಣಿಜ್ಯ/ವಿಜ್ಞಾನವನ್ನೂ, ವಿಜ್ಞಾನದವರು ಕಡ್ಡಾಯವಾಗಿ ವಾಣಿಜ್ಯ/ಕಲೆಯನ್ನೂ, ವಾಣಿಜ್ಯದವರು ಕಡ್ಡಾಯವಾಗಿ ವಿಜ್ಞಾನ/ಕಲೆಯನ್ನಷ್ಟೇ ತೆಗೆದುಕೊಳ್ಳುವಂತೆ ನಿರ್ಬಂಧಿಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ತೀವ್ರ
ಅನನುಕೂಲವಾಗಿದೆ.

ಕಲಾ ವಿದ್ಯಾರ್ಥಿಗಳು ಭೌತಶಾಸ್ತ್ರವನ್ನೋ ಗಣಿತವನ್ನೋ ಓದುವುದರಲ್ಲಿ ಆಸಕ್ತಿಯೇ ಇಲ್ಲ ಅಂದಾಗಲೂ ಬಲವಂತವಾಗಿ ಕೊಟ್ಟು ಅವರ ಭವಿಷ್ಯ ಹಾಳು ಮಾಡಬೇಕೇ? ಇದು ರಾಷ್ಟ್ರೀಯ ಶಿಕ್ಷಣ ನೀತಿಯ ‘ಮುಕ್ತ ಆಯ್ಕೆ’ಗೆ ವಿರುದ್ಧವಲ್ಲವೇ? ಸಂಬಂಧಪಟ್ಟವರು ಗಮನಹರಿಸಬೇಕಾಗಿ ಮನವಿ.

- ಸುಮನ, ಚಿಕ್ಕಮಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು