ಮೆಟ್ರೊ ಕ್ಯಾಷ್ ಆ್ಯಂಡ್ ಕ್ಯಾರಿ, 2003ರಲ್ಲಿ ಬಂದಾಗ ವಿದೇಶಿಯರು ನಮ್ಮ ಚಿಲ್ಲರೆ ವ್ಯಾಪಾರ ವಹಿವಾಟನ್ನು ಆಕ್ರಮಿಸಿಬಿಡುತ್ತಾರೆ ಎಂಬ ಹುಯಿಲು ಎದ್ದಿತ್ತು. ಜರ್ಮನಿಯ ಆ ಕಂಪನಿಯ ಭಾರತದ ವ್ಯಾಪಾರವನ್ನು ಸ್ವದೇಶಿ ಕಂಪನಿಯೊಂದು (ರಿಲಯನ್ಸ್‌ನ ಉಪ ಕಂಪನಿ ಆರ್.ಆರ್.ವಿ.ಎಲ್.) ಕೊಂಡುಕೊಳ್ಳಲಿದೆ ಎಂದು ವರದಿಯಾಗಿದೆ (ಮುಂದಿನ ಮಾರ್ಚ್ ವೇಳೆಗೆ ಪ್ರಕ್ರಿಯೆ ಮುಗಿಯಲಿದೆ). ಈಗ ಇರುವ 16,600 ರೀಟೇಲ್ ಅಂಗಡಿಗಳ ಜತೆ ಈ 31 ಡಿಸ್ಟ್ರಿಬ್ಯೂಷನ್ ಸೆಂಟರ್ ಜಾಲವೂ ಸೇರಲಿದೆ. ಸಣ್ಣ ಕಿರಾಣಿ ಅಂಗಡಿಗಳು, ಹೋಟೆಲ್ ಹಾಗೂ ರೆಸ್ಟೊರೆಂಟ್‌ಗಳು ಬಿಸಿನೆಸ್ ರೂಪದಲ್ಲಿ ಮೆಟ್ರೊದಿಂದ ಸರಕು ಖರೀದಿಸುತ್ತಿವೆ. ಗ್ರಾಹಕನ ದೃಷ್ಟಿಯಿಂದ ರೀಟೇಲ್ ಜಾಲದ ಸ್ಟೋರ್‌ಗಳು ಹಾಗೂ ಬಿಡಿ ಅಂಗಡಿ ಹೀಗೆ ಆಯ್ಕೆಗಳಿದ್ದವು. ಆಮೇಲೆ ಮಾಲ್‌ಗಳು ಬಂದವು. ಈಗ ಒಂದೇ ಉದ್ಯಮ ಗುಂಪು ಎರಡೂ ಬಗೆಯ ವ್ಯಾಪಾರದಲ್ಲಿ ತೊಡಗಲು ಅನುವಾಗುತ್ತದೆ. ಅದು ಇದೀಗ ಎಫ್ಎಂಸಿಜಿಗಳಿಗಾಗಿ (ವೇಗವಾಗಿ ಮಾರಾಟವಾಗುವ ಗ್ರಾಹಕ ವಸ್ತು) ಆಕರ್ಷಕ ಹೆಸರುಳ್ಳ ಶಾಪ್‌ಗಳ ನೆಟ್‌ವರ್ಕ್ ಒಂದನ್ನೂ ಆರಂಭಿಸಿದೆ.
ಇಲ್ಲಿ ಗ್ರಾಹಕರು ಹಾಗೂ ಸಣ್ಣ ವರ್ತಕರು ಹೆಚ್ಚಿನ ಆಯ್ಕೆಯ ಅವಕಾಶ ಪಡೆಯುತ್ತಾರಾ ಎಂಬುದು ಒಂದು ಅಂಶವಾದರೆ, ವ್ಯವಹಾರದ ದೃಷ್ಟಿಯಿಂದ ರೀಟೇಲ್ ಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆಗೆ ಏನಾಗುತ್ತದೆ ಎಂಬ ಇನ್ನೊಂದು ಅಂಶವೂ ಮುಖ್ಯ. ಸಿ.ಸಿ.ಐ. ( ಸ್ಪರ್ಧಾ ಆಯೋಗ) ಆಕ್ಷೇಪಗಳು ಬರುವುದಕ್ಕಾಗಿ ಕಾಯದೆ, ತಾನಾಗಿಯೇ ವಿಷಯವನ್ನು ಪರಿಶೀಲಿಸುವುದೇ?
ಎಚ್.ಎಸ್. ಮಂಜುನಾಥ,ಗೌರಿಬಿದನೂರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.