ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಬೆಲೆ ನಿಯಂತ್ರಣಕ್ಕೆ ಸರ್ಕಾರ ಮುಂದಾಗಲಿ

ಅಕ್ಷರ ಗಾತ್ರ

ಬೆಲೆ ಏರಿಕೆಯ ಕುರಿತು ಲೋಕಸಭೆಯ ಚರ್ಚೆಯಲ್ಲಿ ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸಿರುವುದು ವರದಿಯಾಗಿದೆ. ಇದು, ದೊಡ್ಡವರ ಸಮಾಚಾರ. ಅಹವಾಲು ಬೆಲೆ ಏರಿಕೆ ಬಗ್ಗೆ. ಇನ್ನು, ಉತ್ತರಪ್ರದೇಶದ ಒಂದನೇ ತರಗತಿಯ ಪುಟ್ಟ ಬಾಲಕಿ ಕೀರ್ತಿ ‘ಪೆನ್ಸಿಲ್, ರಬ್ಬರ್, ಮ್ಯಾಗಿ ಬೆಲೆ ಹೆಚ್ಚಿಸಿದ್ದೀರಿ. ಎಲ್ಲಾ ದುಬಾರಿಯಾಗಿವೆ’ ಎಂದು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಅಳಲು ತೋಡಿಕೊಂಡಿದ್ದಾಳೆ. ಬಾಲಕಿಗೆ ಪ್ರಧಾನಿ ಕಚೇರಿಯಿಂದ ಸಾಂತ್ವನ ಪತ್ರದ ಜೊತೆಗೆ ಒಂದಿಷ್ಟು ಪೆನ್ಸಿಲ್‌, ರಬ್ಬರ್, ಮ್ಯಾಗಿ ಪೊಟ್ಟಣ ಕಳುಹಿಸಬಹುದೇನೋ?! ಆದರೆ ದೊಡ್ಡವರ ಕಳವಳಕ್ಕೆ ಸರ್ಕಾರದಿಂದ ಬರೀ ಸಮರ್ಥನೆ, ಅಷ್ಟೆ! ಒಬ್ಬ ಪುಟ್ಟ ಬಾಲಕಿಯು ಸಣ್ಣ ವಿಚಾರವಾದರೂ ದೊಡ್ಡದಾಗಿ ಹೇಳಿದ್ದಾಳೆ. ಕೇಂದ್ರ ಸರ್ಕಾರ ಈಗಲಾದರೂ ಎಚ್ಚೆತ್ತು ಬೆಲೆ ನಿಯಂತ್ರಣ ತರಲು ಮುಂದಾಗಲಿ.

- ನಗರ ಗುರುದೇವ್ ಭಂಡಾರ್ಕರ್,ಹೊಸನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT