ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಸರ್ವಾಧಿಕಾರಿ ಧೋರಣೆಯ ಸಂಕೇತ

ಅಕ್ಷರ ಗಾತ್ರ

‘ರಾಜ್ಯದಲ್ಲಿ ಹಿಂದುತ್ವವನ್ನು ಆಧಾರವಾಗಿಟ್ಟುಕೊಂಡೇ ಸರ್ಕಾರ ನಡೆಸುತ್ತಿದ್ದೇವೆ...’ ಎಂದು ಇಂಧನ ಸಚಿವ ವಿ. ಸುನಿಲ್‌ಕುಮಾರ್‌ ನೀಡಿರುವ ಹೇಳಿಕೆಯು (ಪ್ರ.ವಾ., ಆ. 2) ಸಂವಿಧಾನದ ಆಶಯಗಳಿಗೆ ವಿರುದ್ಧವಾದುದು. ಹಾಗಾದರೆ,ಧರ್ಮಾಧಾರಿತವಾಗಿ ರೂಪುಗೊಂಡಿರುವ ನೆರೆಯ ಪಾಕಿಸ್ತಾನದ ದಾರಿಯನ್ನು ಅವರು ಅನುಸರಿಸುತ್ತಿ ದ್ದಾರೆಯೇ?

ಧರ್ಮವು ವೈಯಕ್ತಿಕವಾದುದು. ಜಾತ್ರೆ ಹಾಗೂ ವಿಶೇಷ ದಿನಗಳಲ್ಲಿ ದೇವರ ರಥೋತ್ಸವಗಳನ್ನು ಸಾಮೂಹಿಕವಾಗಿ ನಡೆಸಿದರೂ ಅದರಲ್ಲಿ ಭಾಗವಹಿಸಬೇಕೇ ಬೇಡವೇ ಎಂಬ ನಿರ್ಣಯ ಆಗುವುದು ವೈಯಕ್ತಿಕ ನೆಲೆಯಲ್ಲಿ. ಎಲ್ಲರೂ ಭಾಗವಹಿಸಲೇಬೇಕು ಎಂಬ ಒತ್ತಾಯ ಸಂವಿಧಾನಪೂರ್ವ ಭಾರತದಲ್ಲೂ ಇರಲಿಲ್ಲ. ಇಂತಹ ಸಹಜ, ಸಾಮಾನ್ಯ ತಿಳಿವಳಿಕೆ ಹಾಗೂ ಸಂವಿಧಾನದ ಆಶಯಗಳನ್ನು ಜನಪ್ರತಿನಿಧಿಗಳೇ ಪಾಲಿಸದೆ, ವೈಯಕ್ತಿಕ ಅಭಿಪ್ರಾಯದ ಮೇರೆಗೆ ಸರ್ಕಾರವನ್ನು ಮುನ್ನಡೆಸುತ್ತೇವೆ ಎನ್ನುವುದು ಸರ್ವಾಧಿಕಾರಿ ಧೋರಣೆಯ ಸಂಕೇತ.

ಪು.ಸೂ.ಲಕ್ಷ್ಮೀನಾರಾಯಣ ರಾವ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT