ಚಿರಾಯುಗಳು...!

7

ಚಿರಾಯುಗಳು...!

Published:
Updated:

‘ಉತ್ತಮ ಚಾರಿತ್ರ್ಯವುಳ್ಳವರನ್ನು ಪ್ರತಿನಿಧಿಗಳಾಗಿ ಬಯಸುವುದು ಜನರ ಹಕ್ಕು’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಜೊತೆಗೆ ‘ಅಪರಾಧ ಹಿನ್ನೆಲೆಯಿರುವ ರಾಜಕಾರಣಿಗಳನ್ನು ದೂರ ಇಡಬೇಕು’ ಎಂದು ಸಲಹೆ ನೀಡಿರುವ ಕೋರ್ಟ್‌, ಈ ನಿಟ್ಟಿನಲ್ಲಿ ಕಾನೂನು ಮಾಡುವ ಹೊಣೆ ಸಂಸತ್ತಿನದ್ದು ಎಂದು ಹೇಳಿದೆ.

ಜನರ ಬಯಕೆಯ ‘ಹಕ್ಕು’ ಸಾರ್ಥಕವಾಗಬೇಕಾದರೆ ರಾಜಕೀಯ ಪಕ್ಷಗಳು, ಅಪರಾಧ ಹಿನ್ನೆಲೆ ಇರುವವರನ್ನು ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಬಾರದು! ಹಾಗೆ ಮಾಡಿದರೆ ಜನರ ಹಕ್ಕನ್ನು ಕಸಿದುಕೊಂಡಂತೆ. ಆದರೆ ಇಂಥ ಸಂದರ್ಭ ಸೃಷ್ಟಿಯಾದಾಗ ಅದರ ನಿವಾರಣೆ ಯಾರಿಂದ?

ಈ ನಿಟ್ಟಿನಲ್ಲಿ ಕಾನೂನು ರಚಿಸುವುದು ಸಂಸತ್ತಿನ ಹೊಣೆ ಎಂದಾದರೆ, ಇಂಥ ಕಾನೂನು ಬರುತ್ತದೆನ್ನುವುದು ಭ್ರಮೆಯೇ ಸರಿ! ಹಣಬಲ, ತೋಳ್ಬಲ ಮತ್ತು ಜನಬಲಗಳನ್ನು ಒಟ್ಟು ಮಾಡುವವರೇ ಸಾಮಾನ್ಯವಾಗಿ ಅಪರಾಧ ಹಿನ್ನೆಲೆಯ ರಾಜಕಾರಣಿಗಳು. ಇವರ
ಬೆಂಬಲವನ್ನು ಕಳೆದುಕೊಳ್ಳುವ ಮೂರ್ಖತನವನ್ನು ರಾಜಕೀಯ ಪಕ್ಷಗಳು ಮಾಡುವವೇ? ರಾಜಕೀಯ ಪಕ್ಷಗಳಿಂದ ಇದಾಗುವುದಿಲ್ಲ ಎಂಬುದನ್ನು ಅರಿತೇ ಸುಪ್ರೀಂ ಕೋರ್ಟಿನ ಮೊರೆ ಹೋಗಿದ್ದು. ಸುಪ್ರೀಂ ಕೋರ್ಟ್‌ ಸಹ ಕೈಚೆಲ್ಲಿದೆ ಎಂದರೆ ಜನರ ಬಯಕೆಯ ಹಕ್ಕು ತೀರ್ಪಿನಲ್ಲಷ್ಟೇ ಉಳಿದಿರುತ್ತದೆ. ಅಂದಮೇಲೆ, ಕ್ರಿಮಿನಲ್ ಹಿನ್ನೆಲೆಯ ರಾಜಕಾರಣಿಗಳು ನಮ್ಮ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಶಾಸನಕರ್ತರಾಗುವುದೇ ವಾಸ್ತವ. ಇವರು ಚಿರಾಯುಗಳು!

-ಸಾಮಗ ದತ್ತಾತ್ರಿ, ಬೆಂಗಳೂರು

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !