ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿಯ ಮಿತಿ ಮೀರದಿರಲಿ

ಅಕ್ಷರ ಗಾತ್ರ

ಈಗಿನ ದಿನಗಳಲ್ಲಿ ವಿಶೇಷವಾಗಿ ಮಧ್ಯಮ ವರ್ಗದ ಜನರು ಸರ್ಕಾರಿ ನೌಕರಿಯ ಮೇಲೆ ಅವಲಂಬಿತರಾಗಿಲ್ಲ. ಆದರೆ ಎಲ್ಲರೂ ಮೀಸಲಾತಿ ಬಯಸುತ್ತಿರುವುದು ಶೈಕ್ಷಣಿಕ ಸೀಟುಗಳಿಗಾಗಿ. ಉತ್ತಮ ಸರ್ಕಾರಿ ಸಂಸ್ಥೆಗಳಲ್ಲಿ ತುಂಬಾ ಸ್ಪರ್ಧೆ ಇದೆ. ಈಗಿರುವ ಶೇ 50ರ ಪರಿಮಿತಿಯನ್ನು ಮೀರಿ ಮೀಸಲಾತಿಯನ್ನು ನೀಡಬೇಕೆಂದು ರಾಜ್ಯ ಸರ್ಕಾರವು ಸುಪ್ರಿಂ ಕೋರ್ಟ್‌ಗೆ ಮನವಿ ಮಾಡಿದೆ. ಅಂದರೆ ಜನರಲ್ ಕೆಟಗರಿ ಸೀಟುಗಳು ಇನ್ನೂ ಕಡಿಮೆಯಾಗುತ್ತವೆ.

ಜನರಲ್ ಕೆಟಗರಿಯೆಂದರೆ ಅದು ಬರೀ ಪ್ರಬಲ ಜಾತಿಯವರಿಗೆ ಸಂಬಂಧಿಸಿದ್ದು ಎನ್ನುವ ಭ್ರಮೆ ಬಹು ಜನರಿಗೆ ಇದೆ. ಯಾವುದೇ ಮೀಸಲಾತಿ ಕೆಟಗರಿ ಇದ್ದರೂ ಜನರಲ್ ಕೆಟಗರಿಯಲ್ಲಿ ಸೀಟು ಲಭ್ಯವಿದ್ದರೆ ಅದಕ್ಕೆ ಆದ್ಯತೆ ನೀಡಲಾಗುತ್ತದೆ. ಅಂದಾಗಲೇ ಮೀಸಲಾತಿಗೆ ಅರ್ಥ ಬರುವುದು. ಇದು ಬಹು ಜನರಿಗೆ ತಿಳಿದಿಲ್ಲವೆಂದೆನಿಸುತ್ತದೆ. ಆ‍ರ್ಥಿಕವಾಗಿ ಹಿಂದುಳಿದವರಿಗಾಗಿ ಈಗಾಗಲೇ ಶೇ 10ರಷ್ಟು ಮೀಸಲಾತಿ ನೀಡಲಾಗಿದೆ. ಅಂದರೆ ಇಲ್ಲಿಯವರೆಗೆ ಯಾವ ಜಾತಿಗಳಿಗೆ ಮೀಸಲಾತಿ ಇರಲಿಲ್ಲವೋ ಅವರಿಗಾಗಿ ಇನ್ನೊಂದು ಕೆಟಗರಿ ಮಾಡಿ ಮೀಸಲಾತಿ ನೀಡಿದಂತಾಯಿತು. ನಮ್ಮದು 3ಬಿ ಕೆಟಗರಿಯಾದರೂ ಹೆಚ್ಚಿನ ಆದಾಯದ ಕಾರಣ ಜನರಲ್ ಕೆಟಗರಿಯಲ್ಲಿ ಬರುತ್ತೇವೆ ಮತ್ತು ಇದೇ ರೀತಿ ಎಲ್ಲ ಕೆಟಗರಿಯವರೂ ಕೆನೆಪದರ ನಿಯಮದ ಪ್ರಕಾರ ಜನರಲ್ ಕೆಟಗರಿಯಲ್ಲಿ ಸ್ಪರ್ಧಿಸಬೇಕು. ಜನರಲ್ ಕೆಟಗರಿಯ ಸೀಟುಗಳು ಎಲ್ಲರಿಗೂ ಸಂಬಂಧಿಸಿದ ಕಾರಣ ಇವು ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಿರಬೇಕು.⇒

- ಪ್ರೊ. ಶಶಿಧರ್‌ ಪಾಟೀಲ್‌,ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT