ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಳಿಕೆ ಕುರಿತು ತಪ್ಪು ಮಾಹಿತಿ

ಅಕ್ಷರ ಗಾತ್ರ

ಗೋ ರಕ್ಷಣೆ ಹೆಸರಿನಲ್ಲಿ ಮುಸ್ಲಿಮರ ಮೇಲೆ ನಡೆದ ಗುಂಪು ದಾಳಿಗೆ ಸಂಬಂಧಿಸಿದಂತೆ ಮೋಹನ ಭಾಗವತ್ ಅವರ ಹೇಳಿಕೆಯ ಕುರಿತು ಆರ್ಗನೈಸರ್ ಪತ್ರಿಕೆಯ ಮಾಜಿ ಸಂಪಾದಕ ಡಾ. ಆರ್.ಬಾಲಶಂಕರ್ ಅವರ ವಿಶ್ಲೇಷಣೆಯಲ್ಲಿ (ಪ್ರ.ವಾ., ಜುಲೈ 10) ತಪ್ಪು ಮಾಹಿತಿ ಇದೆ. ಆರ್‌ಎಸ್‌ಎಸ್ ಮತ್ತು ಅದರ ಪರಿವಾರದ ಮೇಲೆ ಇರುವ ಗುರುತರವಾದ ಆರೋಪವೇ ಇತಿಹಾಸವನ್ನು ತಿರುಚುತ್ತಾರೆ ಎಂಬುದು. ಅದನ್ನು ಸಂಘದ ಮುಖವಾಣಿ ಪತ್ರಿಕೆಯ ಮಾಜಿ ಸಂಪಾದಕರು ಗಾಂಧೀಜಿ ಮತ್ತು ಜಿನ್ನಾ ಅವರ ಕುರಿತಾದ ತಿರುಚಿದ ಮಾಹಿತಿಯನ್ನು ಉಲ್ಲೇಖಿಸಿ ಸಾಬೀತು ಮಾಡಿದ್ದಾರೆ. 1916ರ ಲಖನೌ ಒಪ್ಪಂದವು ಗಾಂಧೀಜಿ ಮತ್ತು ಜಿನ್ನಾ ಅವರ ನಡುವೆ ಆಯಿತು. ಮಾಂಸಕ್ಕಾಗಿ ಮುಸ್ಲಿಮರು ಗೋಹತ್ಯೆ ಮಾಡುವುದನ್ನು ನಿಷೇಧಿಸುವುದು ಈ ಒಪ್ಪಂದದ 16 ಅಂಶಗಳಲ್ಲಿ ಸೇರಿತ್ತು ಎಂದು ಲೇಖಕರು ತಿಳಿಸಿದ್ದಾರೆ.

ನಿಜ ಸಂಗತಿ ಎಂದರೆ, ಲಖನೌ ಒಪ್ಪಂದದ ಸಂದರ್ಭದಲ್ಲಿ ಗಾಂಧೀಜಿ ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ಇನ್ನೂ ಪ್ರಾಮುಖ್ಯವನ್ನೇ ಪಡೆದಿರಲಿಲ್ಲ. ಅವರು ಬರೀ ಒಬ್ಬ ಸದಸ್ಯನಾಗಿ ಲಖನೌ ಒಪ್ಪಂದದಲ್ಲಿ ಭಾಗವಹಿಸಿದ್ದರು. ಲಖನೌ ಒಪ್ಪಂದ ಹಿಂದೂ– ಮುಸ್ಲಿಂ ಸಾಮರಸ್ಯಕ್ಕಾಗಿ ಕಾಂಗ್ರೆಸ್‌ನ ನಾಯಕ ಬಾಲಗಂಗಾಧರ ತಿಲಕ್ ಹಾಗೂ ಮುಸ್ಲಿಂ ಲೀಗ್‌ನ ಪರವಾಗಿ ಜಿನ್ನಾ ಅವರ ನಡುವೆ ಆದ ಒಪ್ಪಂದವಾಗಿರುತ್ತದೆ. ಜನರಿಗೆ ತಪ್ಪು ಮಾಹಿತಿ ನೀಡುವ ಕಾಯಕವು ಈ ಲೇಖನದಲ್ಲೂ ಮುಂದುವರಿದಿದೆ. ತಮ್ಮ ಸಂಘದ ಮುಖ್ಯಸ್ಥರ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುವ ಮುಖ್ಯ ಉದ್ದೇಶದ ಈಡೇರಿಕೆಗೆ ಓದುಗರಿಗೆ ಇತಿಹಾಸದ ಕುರಿತು ಅಸತ್ಯ
ತಿಳಿಸಬಾರದು.

– ಸೂರ್ಯ ಮುಕುಂದರಾಜ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT