ಬುಧವಾರ, ಏಪ್ರಿಲ್ 1, 2020
19 °C

ನಿಸ್ವಾರ್ಥ ಸೇವೆ; ಶ್ಲಾಘನೀಯ ಕಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಲ ದಿನಗಳ ಹಿಂದೆ ನನ್ನ ಅಕ್ಕ ಸಾವಿತ್ರಿಯ ಪತಿ ರಾಮನಾಥ್‌ ಅವರು ಸ್ಕೂಟರ್‌ನಲ್ಲಿ ರಾತ್ರಿ 7.30ರ ಸುಮಾರಿಗೆ ಬೆಂಗಳೂರಿನ ಲಾಲ್‌ಬಾಗ್ ರಸ್ತೆಯಲ್ಲಿ ಹೋಗುತ್ತಿದ್ದಾಗ, ಸಿಗ್ನಲ್‌ನಲ್ಲಿ ನಿಯಂತ್ರಣ ಕಳೆದುಕೊಂಡು ತೀವ್ರವಾಗಿ ಗಾಯಗೊಂಡರು. ದಾರಿಯಲ್ಲಿ ಹೋಗುತ್ತಿದ್ದ ವಿಮಲ್‌ ಶೇಖರ್‌ ಎಂಬುವರು, ಪ್ರಜ್ಞಾಹೀನರಾಗಿದ್ದ ರಾಮನಾಥ್‌ ಅವರನ್ನು ಆಟೊದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದರು. ಗಾಯಾಳುವಿನ ಹೆಸರು, ವಿಳಾಸ ತಿಳಿಯದೇ ಇದ್ದುದರಿಂದ ‘unknown’ ಎಂದು ನಮೂದಿಸಿ, ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆಯ ವ್ಯವಸ್ಥೆ ಮಾಡಿ, ಗಾಯಾಳುವಿನ ಜೊತೆ ತಾವೂ ಇದ್ದರು.

ರಾಮನಾಥ್‌ ಅವರ ಮೊಬೈಲ್‌ ಫೋನ್‌ ಸಹಾಯದಿಂದ ಪೊಲೀಸರು ಸಾವಿತ್ರಿಯ ಫೋನ್‌ ನಂಬರನ್ನು ಪತ್ತೆ ಹಚ್ಚಿ ವಿಷಯ ತಿಳಿಸಿದರು. ಕೂಡಲೇ ನಾವು ಮನೆಯವರು ಆಸ್ಪತ್ರೆಗೆ ಧಾವಿಸುವಷ್ಟರಲ್ಲಿ ನನ್ನ ಭಾವ ರಾಮನಾಥ್‌ ಮೃತಪಟ್ಟಿದ್ದರು. ಈ ಸಂದರ್ಭದಲ್ಲಿ ಸಂಚಾರ ಪೊಲೀಸ್‌ ಕುಮಾರ್‌ ಹಾಗೂ ವಿಮಲ್‌ ಶೇಖರ್‌ ಅವರು ನಮ್ಮ ಬಗ್ಗೆ ತೋರಿದ ಕಳಕಳಿ ಅತ್ಯಂತ ಶ್ಲಾಘನೀಯ. ಪ್ರಚಾರದ ಹಂಬಲವಿಲ್ಲದ ವಿಮಲ್‌ ಅವರ ನಿಸ್ವಾರ್ಥ ಸೇವೆಗೆ ನಾವು ಆಭಾರಿಯಾಗಿದ್ದೇವೆ. ನನ್ನ ಅಕ್ಕ ಸಾವಿತ್ರಿಯ ಪಾಲಿಗಂತೂ ಅವರು ಪ್ರಾತಃಸ್ಮರಣೀಯರು.‌

ಆರ್‌.ಎಸ್‌.ಉಷಾ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)