ಎಲ್ಲ ಮಠಗಳಲ್ಲಿ ನಡೆಯುತ್ತಿಲ್ಲವೇಕೆ?

7

ಎಲ್ಲ ಮಠಗಳಲ್ಲಿ ನಡೆಯುತ್ತಿಲ್ಲವೇಕೆ?

Published:
Updated:

ಸಿದ್ಧಗಂಗಾ ಶ್ರೀಗಳಂತಹ ಶಿವಯೋಗಿಗಳು ನಮ್ಮೂರಲ್ಲಿಯೂ ಇದ್ದರೆ ನಮಗೂ ಎಷ್ಟೋ ಒಳ್ಳೆಯದಾಗುತ್ತಿತ್ತು ಎಂದು ರಾಜ್ಯದ ಬಹುತೇಕರಿಗೆ ಈಗ ಅನ್ನಿಸುತ್ತಿರಬಹುದು. ಸ್ವಾಮೀಜಿಯ ದಿನನಿತ್ಯದ ಕಾರ್ಯಶೈಲಿಗಳು ಭಕ್ತರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದ್ದಕ್ಕೆ ಶಿವಕುಮಾರ ಶ್ರೀಗಳ ಕಾಯಕ ನಿಷ್ಠೆಯೇ ಕಾರಣ.

ರಾಜ್ಯದ ಹಲವೆಡೆ ಮಠ-ಮಾನ್ಯಗಳಿದ್ದರೂ ಹೆಚ್ಚಿನವು ಕೆಲವು ಭಕ್ತರಿಗಷ್ಟೇ ಸೀಮಿತವಾಗಿವೆ. ಅನೇಕ ಮಠಾಧೀಶರು ತಮ್ಮ ಕಾಯಕ ಮರೆತಿರುವುದರಿಂದ ಗುರು-ಶಿಷ್ಯರ ಸಂಬಂಧ ಕೂಡ ದೂರವಾಗುತ್ತಾ ಸಾಗುತ್ತಿದೆ. ಸಿದ್ಧಗಂಗಾ ಮಠದ ಅನ್ನ ದಾಸೋಹ, ಅಕ್ಷರ ದಾಸೋಹ, ಭಕ್ತರ ಜೊತೆ ಬೆರೆಯುತ್ತಿದ್ದ ಶ್ರೀಗಳ ಸರಳ ಗುಣ, ಬಡ ಮಕ್ಕಳಿಗೆ ತೋರುತ್ತಿದ್ದ ಕಾಳಜಿಯಂತಹ ಚಿಂತನೆಗಳನ್ನು ಎಲ್ಲ ಮಠಗಳ ಮಠಾಧೀಶರೂ ಮೈಗೂಡಿಸಿಕೊಂಡರೆ ಸಮಾಜ ಸುಧಾರಣೆ ಸಾಧ್ಯ. ಆದರೆ ಅಂತಹ ಕಾರ್ಯ ಇತರ ಮಠಗಳಲ್ಲಿ ನಡೆಯುತ್ತಿಲ್ಲವೇಕೆ?

ಅಪ್ಪು ಶಿರೋಳಮಠ, ವಿಜಯಪುರ

ಬರಹ ಇಷ್ಟವಾಯಿತೆ?

 • 14

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !