ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ಕಾಲ ಮೇಲೆ ಕಾಲು: ಸಭ್ಯ ನಡವಳಿಕೆಯಲ್ಲ

Last Updated 21 ಜೂನ್ 2022, 19:30 IST
ಅಕ್ಷರ ಗಾತ್ರ

ಕೋರ್ಟ್ ಕಲಾಪ ನಡೆಯುವ ವೇಳೆ ಹಾಲ್‍ನಲ್ಲಿ ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದನ್ನು ನಿರ್ಬಂಧಿಸುವ ಯಾವುದೇ ಆದೇಶಗಳಿಲ್ಲ ಎಂದು, ಮಾಹಿತಿ ಹಕ್ಕಿನ ಅಡಿ ಕೇಳಲಾದ ಪ್ರಶ್ನೆಗೆ ಹೈಕೋರ್ಟ್ ಜಂಟಿ ರಿಜಿಸ್ಟ್ರಾರ್ ಉತ್ತರಿಸಿರುವುದಾಗಿ ವರದಿಯಾಗಿದೆ (ಪ್ರ.ವಾ., ಜೂನ್ 21). ಈ ವಿಷಯ ತಿಳಿದಮೇಲೂ ಬಹುಶಃ ಯಾರೂ ಕೋರ್ಟ್ ಹಾಲ್‍ನಲ್ಲಿ ಹೀಗೆ ಕುಳಿತುಕೊಳ್ಳುವುದಿಲ್ಲ, ಹಾಗೆ ಕುಳಿತುಕೊಳ್ಳುವುದು ಸಭ್ಯತೆಯ ಲಕ್ಷಣವೂ ಅಲ್ಲ.

ಕಚೇರಿಗಳಲ್ಲಿ ಕಿರಿಯ ಅಧಿಕಾರಿಗಳು ಮೇಲಿನ ಅಧಿಕಾರಿಗಳ ಸಮ್ಮುಖದಲ್ಲಿ, ಮನೆಯಲ್ಲಿ ಕಿರಿಯರು ಹಿರಿಯರ ಎದುರು, ಶಾಲೆಯಲ್ಲಿ ಗುರುಗಳು ಇರುವೆಡೆಯಲ್ಲಿ ವಿದ್ಯಾರ್ಥಿಗಳು, ಮಠ-ಮಂದಿರಗಳಲ್ಲಿ ಭಕ್ತರು ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುವುದಿಲ್ಲ. ಇಂಥ ವರ್ತನೆಗಳು ಸಂಸ್ಕೃತಿಯ ಭಾಗವಾಗಿ ಜನರಲ್ಲಿ ರೂಢಿಗತವಾಗಿ ಪಾಲನೆಯಾಗಿ ಬಂದಿರುತ್ತವೆ ವಿನಾ ಈ ಕುರಿತು ಸರ್ಕಾರದ ಕಾನೂನುಗಳು, ಆದೇಶಗಳು ಇರುವುದಿಲ್ಲ. ಹಿರಿಯರನ್ನು ಕಂಡಾಗ ಕಿರಿಯರು ಎದ್ದುನಿಲ್ಲುವುದು, ಅವರಿಗೆ ನಮಸ್ಕರಿಸುವುದು, ಅವರ ಬಳಿ ವಿನಯಪೂರ್ವಕವಾಗಿ ಮೆಲುದನಿಯಲ್ಲಿ ಮಾತನಾಡುವುದು, ಸ್ನೇಹಿತರು ಭೇಟಿಯಾದಾಗ ಪರಸ್ಪರ ಶುಭ ಹಾರೈಸುವುದು, ಹಬ್ಬ-ಹರಿದಿನಗಳಲ್ಲಿ ಬಂಧು ಬಳಗದವರು ಶುಭ ಕೋರುವುದು, ಹುಟ್ಟುಹಬ್ಬಕ್ಕೆ ಶುಭಕಾಮನೆಗಳನ್ನು ಹೇಳುವುದು– ಇವೆಲ್ಲ ಸುಸಂಸ್ಕೃತ ನಡವಳಿಕೆಗಳೇ ವಿನಾ ಇವುಗಳಿಗೆ ಕಾನೂನು ಕಟ್ಟಲೆಗಳ ಚೌಕಟ್ಟು ಇರುವುದಿಲ್ಲ. ಹಾಗೆಂದು ಸ್ವೇಚ್ಛಾಚಾರಿಯಾಗಿ ನಡೆದುಕೊಂಡರೆ ಅದು ದುರ್ವರ್ತನೆ ಎನಿಸಿಕೊಳ್ಳುತ್ತದೆ.

– ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT