ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನದ ಮಹತ್ವ ಅರಿಯದ ಶಿಕ್ಷಕರು

Last Updated 30 ಅಕ್ಟೋಬರ್ 2020, 18:07 IST
ಅಕ್ಷರ ಗಾತ್ರ

ವಿಧಾನ ಪರಿಷತ್ತಿಗೆ ನಡೆದ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಶೇಕಡ 66.20ರಷ್ಟು ಮತದಾನವಾಗಿದೆ ಎಂದು ವರದಿಯಾಗಿದೆ. ಮಿಕ್ಕ ಶೇಕಡ 33.80ರಷ್ಟು ಶಿಕ್ಷಕರು ಮತದಾನದಲ್ಲಿ ಏಕೆ ಪಾಲ್ಗೊಂಡಿರಲಿಲ್ಲ? ಅನಿವಾರ್ಯ ಅಥವಾ ತುರ್ತು ಕಾರಣದಿಂದ ಕೆಲವರು ಮತದಾನ ಮಾಡಿಲ್ಲ ಎಂದುಕೊಂಡರೂ ಮತದಾನ ಮಾಡಿದವರ ಪ್ರಮಾಣ ಕಡಿಮೆಯೇ ಸರಿ.

ಭವಿಷ್ಯದಲ್ಲಿ ಉತ್ತಮ ಪ್ರಜೆಗಳನ್ನು ರೂಪಿಸುವ ಜವಾಬ್ದಾರಿ ಹೊತ್ತ ಶಿಕ್ಷಕರೇ ಮತದ ಹಕ್ಕನ್ನು ಚಲಾಯಿಸದೇ ಹೋದರೆ ಪ್ರಜಾಪ್ರಭುತ್ವಕ್ಕೆ ಅರ್ಥವಿರುತ್ತದೆಯೇ? ಮತದಾನದ ಮಹತ್ವ ಅರಿಯುವ ವಿಷಯದಲ್ಲಿ ಇವರು ಮಕ್ಕಳಿಗೆ ಹೇಗೆ ಮಾದರಿಯಾಗುತ್ತಾರೆ? ಶಿಕ್ಷಕರ ಇಂತಹ ನಡೆ ಸರಿಯಲ್ಲ.

ಪತ್ತಂಗಿ ಎಸ್. ಮುರಳಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT