ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚಗುಳಿತನದ ನಾನಾ ರೂಪ‍

Last Updated 6 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ಲಂಚಗುಳಿತನ ಮತ್ತು ಪೊಲೀಸ್ ವ್ಯವಸ್ಥೆಯ ವಿರುದ್ಧ ಗೃಹಸಚಿವರು ಸಿಡಿದೆದ್ದ ವಿಡಿಯೊ ವೈರಲ್‌ ಆಗಿದೆ. ಗೃಹಸಚಿವರ ಇಂತಹ ನಡೆ ಸಮಂಜಸವೇ. ಆದರೂ ತಾವು ಖುದ್ದು ಗೃಹ ಸಚಿವರಾಗಿ, ಅಸಹಾಯಕತೆಯ ತೋರ್ಪಡಿಕೆಯಂತಹ ಮಾತನ್ನಾಡುವುದು ಎಷ್ಟು ಸರಿ ಎಂಬುದು ಸದ್ಯಕ್ಕೆ ಅವರ ಮುಂದಿರುವ ಪ್ರಶ್ನೆ. ಲಂಚಗುಳಿತನ ಗ್ರಾಮ ಪಂಚಾಯಿತಿ ಸದಸ್ಯನಿಂದ ಹಿಡಿದು ಶಾಸಕ, ಸಂಸದನವರೆಗೂ, ಅಷ್ಟೇ ಯಾಕೆ ಸರ್ಕಾರದ ಕುರ್ಚಿಯಲ್ಲಿ‌ ಅಂಟಿಕೊಂಡವರಲ್ಲೂ ಬೇರೆ ಬೇರೆ ರೂಪಗಳಲ್ಲಿ, ಅವತಾರಗಳಲ್ಲಿ ಜನಸಾಮಾನ್ಯರ ಕುತ್ತಿಗೆಯನ್ನು ಬಿಗಿದಿದೆ.

ಈಗಿನ ಪ್ರಧಾನಿಯವರು ಅಧಿಕಾರಕ್ಕೆ ಬರುವಾಗ ‘ಹಿಂದಿನ ಸರ್ಕಾರಗಳು ಲಂಚದಲ್ಲೇ ಬದುಕಿವೆ. ನಾವು ಆ ರೀತಿ ಇಲ್ಲ. ನಮ್ಮದು ಸಿದ್ಧಾಂತ, ತತ್ವ, ಪಕ್ಷನಿಷ್ಠೆ, ಅಭಿವೃದ್ಧಿಗಾಗಿ ತುಡಿತ. ಮುಂದೆ ಹೊಸ ಕ್ರಾಂತಿ ಶುರುವಾಗುತ್ತದೆ. ದೇಶ ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ಧಿಯಾಗುತ್ತದೆ. ಜನಸಾಮಾನ್ಯರು ನಿರಾಳವಾಗಿ ಬದುಕಬಹುದು’ ಎಂಬಂತಹ ಉದ್ಘೋಷಗಳನ್ನು ಮಾಡಿದ್ದರು. ಆದರೆ ಕರ್ನಾಟಕವೂ ಒಳಗೊಂಡಂತೆ ಇಡೀ ದೇಶದಲ್ಲಿ ಲಂಚಗುಳಿತನ, ಭ್ರಷ್ಟತೆ, ಅಧಿಕಾರದ ವ್ಯಾಮೋಹಗಳಿಂದ ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರುವ ನಡೆ ಮುಂದುವರಿದಿದೆ. ಹೀಗಿರುವಾಗ ಲಂಚ ಮತ್ತು ಭ್ರಷ್ಟಾಚಾರವನ್ನು ಬುಡಸಮೇತ ನಿರ್ನಾಮಗೊಳಿಸುವ ಪ್ರತಿಜ್ಞೆ ಮಾಡಿದ್ದ ಪ್ರಧಾನಿಯವರು ಈ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲಿ ಅಥವಾ ಮುಖ್ಯಮಂತ್ರಿಯವರಾದರೂ ಮಾತನಾಡಲಿ.

- ಅಶ್ವತ್ಥ ಕಲ್ಲೇದೇವರಹಳ್ಳಿ, ಕುಂಕಾನಾಡು, ಕಡೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT