ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರ ಭಾಷಣಗಳ ಬಾಣ ತರವಲ್ಲ

Last Updated 6 ಮೇ 2019, 19:56 IST
ಅಕ್ಷರ ಗಾತ್ರ

ಚುನಾವಣೆ ಭರಾಟೆಯಲ್ಲಿ ರಾಗ–ದ್ವೇಷಗಳು ಉಲ್ಬಣಗೊಂಡಿವೆ. ಒಬ್ಬರ ಮೇಲೊಬ್ಬರು ಉಗ್ರವಾದ ಭಾಷಣಗಳ ಬಾಣಗಳನ್ನೇ ಬಿಡುತ್ತಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರು ಮೋದಿಯವರನ್ನು ‘ಕಳ್ಳ ಕಳ್ಳ’ ಎಂದು ಜರೆಯುತ್ತಾರೆ. ಮೋದಿಯವರು ‘ನಿಮ್ಮಪ್ಪ ಮಿಸ್ಟರ್ ಕ್ಲೀನ್ ಎಂದು ವಂದಿಮಾಗಧರಿಂದ ಹೆಸರು ತೆಗೆದುಕೊಂಡಿದ್ದರು. ಆದರೆ, ನಂಬರ್‌ ಒನ್‌ ಕಳ್ಳನಾಗಿಯೇ ಕಾಲವಾದರು’ ಎಂದು ಭಾಷಣದ ಬ್ರಹ್ಮಾಸ್ತ್ರದ ಈಟಿ ಪ್ರಯೋಗಿಸಿದ್ದಾರೆ. ಈ ಕಾಲದಲ್ಲಿ ಪರಸ್ಪರರ ಮೇಲಿನ ಆರೋಪಗಳು ಈ ಬಗೆಯವಾದರೆ, ಬಸವಣ್ಣನವರು ಕೂಡಲಸಂಗಮದೇವರನ್ನೇ ದೊಡ್ಡಕಳ್ಳ ಎಂದು ಕರೆದರು. ತಮ್ಮನ್ನು ಸಹ ಕಳ್ಳ ಎಂದು ಕರೆದುಕೊಂಡರು. ಅದು ಬಸವಣ್ಣನವರ ವೈಶಿಷ್ಟ್ಯವೇ ಸರಿ.

ಸಂಪತ್ತನ್ನು ಸಂಗ್ರಹಿಸಿ ಬಡವರಿಗೆ ಇಲ್ಲದಂತೆ ಮಾಡಿರುವ ನಾನು ಕಳ್ಳ, ಸಂಪತ್ತನ್ನು ಬಚ್ಚಿಟ್ಟು ಕೊಂಡಿರುವ ನನ್ನ ಮನೆಗೆ, ನನಗೆ ಬುದ್ಧಿ ಕಲಿಸಲು ಬಂದವನು ಕೂಡಲಸಂಗಮದೇವರು ದೊಡ್ಡ ಕಳ್ಳ ಎಂದರು. ರಾಹುಲ್‌ ಮತ್ತು ಮೋದಿಯವರು ಈ ದಿಕ್ಕಿನಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕು.

-ಡಾ. ವಿಜಯಕುಮಾರ ಮಹಾನುಭಾವಿಗಳು,ಜೋಗಜಲಪಾತ ಮಠ, ಸಿದ್ಧಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT