‘ಚುರುಮುರಿ’ ಅಂಕಣದಲ್ಲಿ ಲಿಂಗರಾಜು ಡಿ.ಎಸ್. ಅವರು ಬರೆದಿರುವ ಯುಗಾದಿ ಭವಿಷ್ಯ (ಪ್ರ.ವಾ., ಏ. 13) ಅದ್ಭುತವಾಗಿದೆ. ಇಡೀ ವರ್ಷವನ್ನು ಯಾವ ಅನುಮಾನವೂ ಇಲ್ಲದಂತೆ ಕನ್ನಡಿಗ ಕಣ್ಣಮುಂದೆ ಕಟ್ಟಿಕೊಳ್ಳಲು ಮತ್ತು ನಿಟ್ಟುಸಿರು ಬಿಡದಂತೆ ತೆಪ್ಪಗಿರಲು ಅನುಕೂಲಕರವಾಗಿದೆ. ಇದರಲ್ಲಿ ಇನ್ನೊಂದೆರಡು ಕ್ಷೇತ್ರಗಳ ಭವಿಷ್ಯ ಬಿಟ್ಟುಹೋಗಿದೆ. ಅವನ್ನು ಹೀಗೆ ಪಟ್ಟಿ ಮಾಡಬಹುದು. 1. ಅತೃಪ್ತ ಮಠ ಮಾನ್ಯಗಳಿಗೆ ಗುಪ್ತನಿಧಿ ಭಾಗ್ಯ. 2. ಸಿ.ಡಿ ಕೇಸುಗಳು ಸಾಕ್ಷ್ಯದ ಕೊರತೆಯಿಂದಾಗಿ ಮಂಗಮಾಯ. 3. ರೈತರು, ಅಂಗನವಾಡಿ ಮಹಿಳೆಯರು, ಸಾರಿಗೆ ನೌಕರರು ಕೂಗುವ ತಾರಕ ಸ್ವರಗಳು ಕೇಳಿಸದಂತೆ ಸರ್ಕಾರಕ್ಕೆ ದನಗಿವುಡು ಭಾಗ್ಯ. ಇಷ್ಟು ಸಾಕು ಬಿಡಿ. ಮೊದಲೇ ಖಜಾನೆ ಖಾಲಿ!

- ಡಾ. ಶಾಂತಾ ನಾಗರಾಜ್, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.