ಬುಧವಾರ, ಏಪ್ರಿಲ್ 1, 2020
19 °C

ಚಿಕಿತ್ಸಾ ಪದ್ಧತಿ: ಪೂರ್ವಗ್ರಹ ಸಲ್ಲದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳ ಮೇಲೆ ಕೊರೊನಾ ವೈರಾಣುವಿನ ಭೀಕರ ಛಾಯೆ ಕವಿದಿರುವ ಈ ಸಂದರ್ಭದಲ್ಲಿ, ಪರ್ಯಾಯ ವೈದ್ಯಕೀಯ ಪದ್ಧತಿಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆಯುರ್ವೇದ ಮತ್ತು ಹೋಮಿಯೋಪಥಿ ಕುರಿತು ಅಲೋಪಥಿ ಅರ್ಥಾತ್ ಪಾಶ್ಚಿಮಾತ್ಯ ವೈದ್ಯಕೀಯ ಪದ್ಧತಿಯ ತಜ್ಞರು ಈಗಲೂ ಪೂರ್ವಗ್ರಹ ಹೊಂದಿದ್ದು, ಈ ಎರಡೂ ಬಗೆಯ ‍ಪದ್ಧತಿಗಳಲ್ಲಿನ ಔಷಧಿಗಳು ಕೊರೊನಾ ವೈರಾಣು ತಡೆಗೆ ಪರಿಣಾಮಕಾರಿ ಅಲ್ಲ ಎಂದು ವಾದಿಸುತ್ತಿದ್ದಾರೆ.

ದೇಶ ವಿದೇಶಗಳಲ್ಲಿ ಈ ಮೂರೂ ವೈದ್ಯಕೀಯ ಪದ್ಧತಿಗಳಲ್ಲಿ ಪ್ರಯೋಗಗಳು ನಡೆಯುತ್ತಿವೆ. ಯಾವ ಪದ್ಧತಿಯ ಔಷಧ ಹೆಚ್ಚು ಪರಿಣಾಮಕಾರಿ ಎಂಬುದು ಇನ್ನು ಕೆಲವೇ ದಿನಗಳಲ್ಲಿ ಖಚಿತವಾಗಲಿದೆ. ಹಾಗಾಗಿ ಯಾವುದೇ ಪದ್ಧತಿಯ ಔಷಧವನ್ನು ಕಡೆಗಣಿಸುವುದಾಗಲೀ ಒಂದು ಪದ್ಧತಿಯ ಬಗ್ಗೆ ಇತರ ಪದ್ಧತಿಯವರಿಗೆ ತಾತ್ಸಾರ ಅಥವಾ ಮತ್ಸರವಾಗಲೀ ಬೇಡ. ಈ ಎಲ್ಲ ಚಿಕಿತ್ಸಾ ಪದ್ಧತಿಗಳ ಉದ್ದೇಶ ಒಂದೇ- ಅದು ರೋಗ ನಿವಾರಿಸುವುದು ಹಾಗೂ ಮನುಷ್ಯನ ಜೀವ ಉಳಿಸುವುದು!

ಕೆ.ಲಕ್ಷ್ಮೀಕಾಂತ್ ರಾವ್, ಮಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)