ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳ ಮೇಲೆ ಕೊರೊನಾ ವೈರಾಣುವಿನ ಭೀಕರ ಛಾಯೆ ಕವಿದಿರುವ ಈ ಸಂದರ್ಭದಲ್ಲಿ, ಪರ್ಯಾಯ ವೈದ್ಯಕೀಯ ಪದ್ಧತಿಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆಯುರ್ವೇದ ಮತ್ತು ಹೋಮಿಯೋಪಥಿ ಕುರಿತು ಅಲೋಪಥಿ ಅರ್ಥಾತ್ ಪಾಶ್ಚಿಮಾತ್ಯ ವೈದ್ಯಕೀಯ ಪದ್ಧತಿಯ ತಜ್ಞರು ಈಗಲೂ ಪೂರ್ವಗ್ರಹ ಹೊಂದಿದ್ದು, ಈ ಎರಡೂ ಬಗೆಯ ಪದ್ಧತಿಗಳಲ್ಲಿನ ಔಷಧಿಗಳು ಕೊರೊನಾ ವೈರಾಣು ತಡೆಗೆ ಪರಿಣಾಮಕಾರಿ ಅಲ್ಲ ಎಂದು ವಾದಿಸುತ್ತಿದ್ದಾರೆ.

ದೇಶ ವಿದೇಶಗಳಲ್ಲಿ ಈ ಮೂರೂ ವೈದ್ಯಕೀಯ ಪದ್ಧತಿಗಳಲ್ಲಿ ಪ್ರಯೋಗಗಳು ನಡೆಯುತ್ತಿವೆ. ಯಾವ ಪದ್ಧತಿಯ ಔಷಧ ಹೆಚ್ಚು ಪರಿಣಾಮಕಾರಿ ಎಂಬುದು ಇನ್ನು ಕೆಲವೇ ದಿನಗಳಲ್ಲಿ ಖಚಿತವಾಗಲಿದೆ. ಹಾಗಾಗಿ ಯಾವುದೇ ಪದ್ಧತಿಯ ಔಷಧವನ್ನು ಕಡೆಗಣಿಸುವುದಾಗಲೀ ಒಂದು ಪದ್ಧತಿಯ ಬಗ್ಗೆ ಇತರ ಪದ್ಧತಿಯವರಿಗೆ ತಾತ್ಸಾರ ಅಥವಾ ಮತ್ಸರವಾಗಲೀ ಬೇಡ. ಈ ಎಲ್ಲ ಚಿಕಿತ್ಸಾ ಪದ್ಧತಿಗಳ ಉದ್ದೇಶ ಒಂದೇ- ಅದು ರೋಗ ನಿವಾರಿಸುವುದು ಹಾಗೂ ಮನುಷ್ಯನ ಜೀವ ಉಳಿಸುವುದು!

ಕೆ.ಲಕ್ಷ್ಮೀಕಾಂತ್ ರಾವ್, ಮಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.