ಶುಕ್ರವಾರ, ಜೂನ್ 5, 2020
27 °C

ವಾಚಕರ ವಾಣಿ| ಏನನ್ನೋ ಹೇಳುತ್ತಿದೆ ಕೊಹ್ಲಿ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಕೆಟ್‌ ಆಟಗಾರರ ಆಯ್ಕೆಯಲ್ಲಿ ಪ್ರಭಾವ, ವಶೀಲಿ ಮತ್ತು ಲಂಚದ ಪಾತ್ರದ ಬಗೆಗೆ ವದಂತಿಗಳು ಬಹುಕಾಲದಿಂದ ಕೇಳಿಬರುತ್ತಿದ್ದವು. ಆದರೆ ಅದು ಮ್ಯಾಚ್‌ ಫಿಕ್ಸಿಂಗ್‌ನಷ್ಟು ಸುದ್ದಿಯಾಗಿರಲಿಲ್ಲ. ಭಾರತದ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ತಮ್ಮ ಹೇಳಿಕೆಯೊಂದರಲ್ಲಿ ಈ ವದಂತಿಯನ್ನು ದೃಢೀಕರಿಸಿದ್ದಾರೆ. ಲೀಗ್‌ ಹಂತದ ಪಂದ್ಯಾವಳಿಯೊಂದಕ್ಕೆ ಆಯ್ಕೆ ಮಾಡಲು ‘ಪ್ರತಿಭೆ ಓಕೆ… ಆದರೆ ಇಂತಿಷ್ಟು ಕೊಟ್ಟರೆ ಆಯ್ಕೆ ಮಾಡಬಹುದು’ ಎಂದು ಆಯ್ಕೆದಾರರು ತಿಳಿಸಿದ್ದು, ಅವರ ತಂದೆ ಇದನ್ನು ಖಡಾಖಂಡಿತವಾಗಿ ನಿರಾಕರಿಸಿದ್ದರಂತೆ.

ಭಾರತದ ತಂಡದಲ್ಲಿ ಕೆಲವರ ಸಾಧನೆಯನ್ನು ಗಮನಿಸಿದಾಗ, ಈ ದಿಸೆಯಲ್ಲಿ ಸಂಶಯಗಳಿಗೆ ಇಂಬು ಸಿಗುತ್ತದೆ. ಮ್ಯಾಚ್‌ ಫಿಕ್ಸಿಂಗ್‌ ಅನ್ನೂ ಮೊದಮೊದಲು ತಳ್ಳಿಹಾಕಲಾಗಿತ್ತು. ಅದನ್ನು ಆಳವಾಗಿ ವಿಚಾರಣೆ ಮಾಡಿದಾಗ ಕೆಲವು ‘ವಿಕೆಟ್‌’ಗಳು ಉರುಳಿದ್ದವು. ಅಕಸ್ಮಾತ್‌ ಕೊಹ್ಲಿಯವರ ಹೇಳಿಕೆಗೆ ತಾರ್ಕಿಕ ಅಂತ್ಯ ಕಾಣಿಸಿದರೆ, ಏನೇನು ಕರ್ಮಕಾಂಡಗಳು ಹೊರಬರುತ್ತವೋ.

-ರಮಾನಂದ ಶರ್ಮಾ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು