ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಭಾವನೆಗೆ ಧಕ್ಕೆ

Last Updated 16 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ವಿಜಯ್‌ ಮಲ್ಯ, ಚೋಕ್ಸಿ, ನೀರವ್ ಮೋದಿ ಅವರಂತಹ ಉದ್ಯಮಿಗಳು ಭಾರತೀಯ ಬ್ಯಾಂಕುಗಳಲ್ಲಿ ಸಾಲ ಪಡೆದು ದೇಶ ಬಿಟ್ಟು ಓಡಿಹೋದ ಘಟನೆಗಳು ಒಂದು ಕಡೆಗಿವೆ. ಇನ್ನೊಂದು ಕಡೆಗೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಕಾಂಗ್ರೆಸ್‌ನಿಂದ ಗೆದ್ದವರು ಬಿಜೆಪಿಗೆ ಪಕ್ಷಾಂತರ ಆಗುವ ಕೆಲಸ ನಡೆಯುತ್ತಿದೆ. ಈ ಎರಡೂ ಕೆಲಸಗಳು ಹಗಲು ದರೋಡೆಯಂತೆ. ಲಕ್ಷಾಂತರ ಖಾತೆದಾರರು ಬ್ಯಾಂಕುಗಳಲ್ಲಿ ಇಟ್ಟಿದ್ದ ಹಣವನ್ನು ಸಾಲದ ರೂಪದಲ್ಲಿ ಪಡೆದು ದೇಶ ಬಿಟ್ಟು ಓಡಿಹೋದದ್ದು ದೇಶದ್ರೋಹವಾದರೆ, ಒಂದು ಪಕ್ಷದ ಸಿದ್ಧಾಂತದಲ್ಲಿ ನಂಬಿಕೆ ಇರಿಸಿ ಮತಕೊಟ್ಟ ಮತದಾರರ ಭಾವನೆಗಳನ್ನು ಧಿಕ್ಕರಿಸಿ, ಗೆದ್ದವರು ರಾಜೀನಾಮೆಯನ್ನೂ ಕೊಡದೆ ಗೆಲುವಿನ ಸಮೇತ ಪಕ್ಷ ಬದಲಿಸುವುದು ಮತದಾರನಿಗೆ ಮಾಡಿದ ದ್ರೋಹ ಅಲ್ಲವೇ?

ಹೋದವರಿಗೆ ಲಾಭ ಆಗಬಹುದು, ಬರಮಾಡಿಕೊಂಡವರಿಗೂ ಖುಷಿ ಸಿಗಬಹುದು, ಆದರೆ ಮತದಾರರ ಭಾವನೆಗಳಿಗೆ ಸಿಕ್ಕಿದ ಬೆಲೆ ಏನು? ಈ ಅನೈತಿಕತೆಯನ್ನು ಎಲ್ಲ ಪಕ್ಷಗಳೂ ಸೇರಿ ತಡೆಯದೇ ಹೋದರೆ, ಭವಿಷ್ಯದಲ್ಲಿ ಪ್ರಜಾಪ್ರಭುತ್ವಕ್ಕೆ ಕಿಮ್ಮತ್ತು ಉಳಿಯುವುದಿಲ್ಲ.

⇒ತಾ.ಸಿ.ತಿಮ್ಮಯ್ಯ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT