ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡ್ಡ ಬರದ ಕಾನೂನುಗಳು!

Last Updated 25 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ರಾಬರ್ಟ್ ವಾದ್ರಾ, ನಿತಿನ್ ಗಡ್ಕರಿ, ಹೀಗೆ ಉದ್ಯಮಿಗಳೂ, ರಾಜಕಾರಣಿಗಳೂ ದೇಶದ ಕೃಷಿ ಭೂಮಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಬೆಳಕಿಗೆ ಬಾರದ ಇನ್ನೆಷ್ಟು ಇಂತಹ ಪ್ರಕರಣಗಳಿರಬಹುದು?

ಸಾಮಾನ್ಯ ಭೂರಹಿತ ಕೃಷಿ ಕಾರ್ಮಿಕನೊಬ್ಬ ತನ್ನ ಜೀವನೋಪಾಯಕ್ಕಾಗಿ ಕೃಷಿ ಭೂಮಿ ಖರೀದಿಸಲು, ಅಥವಾ ತಾನು ಸಾಗುವಳಿ ಮಾಡುತ್ತಿರುವ ಭೂಮಿಗೆ ದಾಖಲೆಗಳನ್ನು ಪಡೆಯಲು ನೂರೆಂಟು ಕಾನೂನುಗಳು ಅಡ್ಡ ಬರುತ್ತವೆ!

ಅಲ್ಲದೆ ಅರಣ್ಯ ಹಕ್ಕು ಕಾಯ್ದೆಯಡಿ ಆದಿವಾಸಿ ಕೃಷಿಕನೊಬ್ಬ ಪಡೆಯಬಹುದಾದ ಹಕ್ಕುಪತ್ರದಲ್ಲಿ ಇಲ್ಲ ಸಲ್ಲದ ನಿಬಂಧನೆಗಳೂ ಇರುತ್ತವೆ. ಒಕ್ಕಲೆಬ್ಬಿಸಲು ಬೇಕಾಗುವ ಎಲ್ಲ ಅಂಶಗಳನ್ನೂ ಒಳಗೊಂಡಂತಿರುವಂತೆ ರೂಪಿಸಲಾಗಿರುತ್ತದೆ.

ಆದರೆ ಅನಗತ್ಯವಾಗಿ ಭೂಮಿ ಖರೀದಿಸುವ, ದೇಶದ ಆಸ್ತಿಪಾಸ್ತಿಗಳನ್ನು ಗುಡಿಸಿ ಗುಡ್ಡೆ ಹಾಕಿಕೊಳ್ಳುವ ರಾಜಕಾರಣಿಗಳಿಗೆ, ಉದ್ಯಮಿಗಳಿಗೆ ಹಿಡುವಳಿ ಮಿತಿ ಸೇರಿದಂತೆ ಯಾವ ಕಾಯ್ದೆ ಕಾನೂನು ಅಡ್ಡ ಬರದಿರುವುದು ಆಶ್ಚರ್ಯಕರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT