ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟುಗೂಡಿ ರಾಜ್ಯದಲ್ಲಿ ಸರ್ಕಾರ ರಚಿಸಿವೆ. ‘ಅನ್ಯೋನ್ಯತೆಯಿಂದ ಐದು ವರ್ಷಗಳ ಉತ್ತಮ ಸರ್ಕಾರ ನೀಡುತ್ತೇವೆ’ ಎಂಬ ಭರವಸೆಯನ್ನು ಜನತೆಗೆ ನೀಡಿವೆ. ಈ ಸರ್ಕಾರ ಗುಣಾತ್ಮಕ ಆಡಳಿತವನ್ನು ನೀಡಲಿ ಎಂದು ಆಶಿಸೋಣ.

ಸಾಂಸ್ಕೃತಿಕವಾಗಿ ಕಾರ್ಯನಿರ್ವಹಿಸುವ ಅಕಾಡೆಮಿಗಳ ಅಧ್ಯಕ್ಷರನ್ನು ಹೊಸ ಸರ್ಕಾರವು ಬದಲಾಯಿಸುವುದು ಸರಿಯಲ್ಲ. ಈ ಅಕಾಡೆಮಿಗಳ ಅಧ್ಯಕ್ಷರು ಹಾಗೂ ಸದಸ್ಯರನ್ನು ರಾಜಕೀಯ ದೃಷ್ಟಿಯಿಂದ ನೋಡುವುದು ಸರಿಯಲ್ಲ. ಇಂತಹ ಅಭಿಪ್ರಾಯವನ್ನು ಕೆಲವು ವರ್ಷಗಳಿಂದ ಸಾಹಿತಿಗಳು ಮತ್ತು ಕಲಾವಿದರು ತೀವ್ರವಾಗಿ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಈ ಅಕಾಡೆಮಿಗಳನ್ನು ನಿಗಮ–ಮಂಡಳಿಗಳ ಜೊತೆ ಹೋಲಿಸಿ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ. ಎಲ್ಲಾ ಅಕಾಡೆಮಿಗಳು ಯಾವುದೇ ಆತಂಕವಿಲ್ಲದೆ ಕಾರ್ಯನಿರ್ವಹಿಸಲು ಪ್ರಸ್ತುತ ಸರ್ಕಾರ ಸಹಕರಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.