ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಮಾನಿಗಳ ಹುಚ್ಚಾಟ

Last Updated 14 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ತಮಗಿಷ್ಟವಾದ ಚಿತ್ರ ನಟ ನಟಿಯರ ಅಭಿನಯ ಕಲೆಯನ್ನು ಮೆಚ್ಚಿ, ತಮ್ಮ ಹೃದಯ ಮಂದಿರದಲ್ಲಿ ಆರಾಧಿಸುವ ಸಾಕಷ್ಟು ಅಭಿಮಾನಿಗಳು ಕರ್ನಾಟಕದಲ್ಲಿದ್ದಾರೆ. ಆದರೆ ನಟ ಸುದೀಪ್ ಅವರನ್ನು ನೋಡಬೇಕೆಂದು ಬೆಳಗಾವಿಯ ಇಬ್ಬರು ಯುವಕರು ಇತ್ತೀಚೆಗೆ ಆತ್ಮಹತ್ಯೆ ಪ್ರಯತ್ನ, ಉಪವಾಸದಂತಹ ಹುಚ್ಚಾಟಗಳಿಗೆ ಮುಂದಾಗಿರುವುದು ದುರದೃಷ್ಟಕರ.

ಚಿತ್ರನಟರಿಗೂ ಅವರದೇ ಆದ ಜೀವನ, ಶೂಟಿಂಗ್‌ನಂತಹ ಕೆಲಸ ಕಾರ್ಯಗಳಿರುತ್ತವೆ. ಪ್ರತಿಯೊಬ್ಬ ಅಭಿಮಾನಿಯನ್ನೂ ಕಂಡು ವಿಚಾರಿಸುವಷ್ಟು ವ್ಯವಧಾನ ಅವರಿಗಿರುವುದಿಲ್ಲ. ಬಿಡುಗಡೆಯಾಗುವ ಅವರ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ನೋಡುವ ಮೂಲಕ ಕನ್ನಡ ಭಾಷೆಗೆ ಹಾಗೂ ನಟರಿಗೆ ಗೌರವ, ಅಭಿಮಾನ ಸಲ್ಲಿಸಬೇಕೇ ಹೊರತು, ಅಂಧಾಭಿಮಾನ ಪ್ರದರ್ಶಿಸುವುದಲ್ಲ. ಇಂತಹ ಮಕ್ಕಳಿಗೆ ಪಾಲಕರು ಮತ್ತು ಶಿಕ್ಷಕರ ಸೂಕ್ತ ಮಾರ್ಗದರ್ಶನ, ಸಲಹೆ ಅತ್ಯವಶ್ಯ.
ಅಶೋಕ ಜಿ. ಕಮತಗಿ
ಮದ್ಲೂರ, ಸವದತ್ತಿ ತಾಲ್ಲೂಕು

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT