ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅರ್ಪಣೆ’ಯನ್ನೂ ಕೈಬಿಡಿ

Last Updated 21 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಪ್ರಶಾಂತ ಎಂ. ಕುನ್ನೂರ ಅವರು ಬರೆದ,- ‘ಅಕ್ಷರ ಅರಸೊತ್ತಿಗೆ ಬೇಡ’ (ಪ್ರ.ವಾ. ಏ.21) ಎಂಬುದನ್ನು ನಾನೂ ಅನುಮೋದಿಸುತ್ತೇನೆ. ಜೊತೆಗೆ ಅರಸುತನಗಳ ಸಂಬಂಧಪಟ್ಟ ವೈಭವಗಳನ್ನೂ ನಿಷೇಧಿಸಬೇಕೆಂಬುದು ನನ್ನ ಬಯಕೆ.

ನಾಯಕರುಗಳಿಗೆ, ವೈಭವದ  ಸಭೆ ಸಮಾರಂಭಗಳಲ್ಲಿ ಕಿರೀಟಧಾರಣೆ, ಬೆಳ್ಳಿ ಬಂಗಾರಗಳ ಕತ್ತಿ, ಗದೆ ಅರ್ಪಿಸುವುದನ್ನೂ ಕೈ ಬಿಡಬೇಕು.  ಅವು ಗುಲಾಮಗಿರಿಯ ಸಂಕೇತಗಳು. ನಮ್ಮದು ಸೈನ್ಯಾಡಳಿತ ದೇಶವಲ್ಲ; ಪ್ರಜಾರಾಜ್ಯ.

ಇಲ್ಲಿ ಪ್ರಜೆಗಳನ್ನು ಪಾಲಿಸಲು ಇಂತಹ ಸಲಕರಣೆಗಳು ಬೇಕಾಗಿಲ್ಲ.ರಾಕ್ಷಸನನ್ನು ಕೊಂದ ಮುರಾರಿ ಪುರಾರಿಗಳಿಗಿಂತ, ಅಂಗುಲಿಮಾಲನನ್ನು ಗೆದ್ದ ಬುದ್ಧ  ನಮಗೆ ಆದರ್ಶವಾಗಬೇಕು. ಇದನ್ನು, ತಮ್ಮ ತಮ್ಮ ಮುಂದಾಳುಗಳನ್ನು ಆರಾಧಿಸುವ ಎಲ್ಲಾ ಪಕ್ಷದವರೂ ಪಾಲಿಸಬೇಕಾದದ್ದು ಇಂದಿನ ಅವಶ್ಯಕತೆಗಳಲ್ಲಿ ಒಂದು.
-ಡಾ. ಈಶ್ವರ ಶಾಸ್ತ್ರಿ ಮೋಟಿನಸರ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT