ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನಗಳ ದುಃಸ್ಥಿತಿ

Last Updated 29 ಜುಲೈ 2013, 19:59 IST
ಅಕ್ಷರ ಗಾತ್ರ

ಎ.ಜಿ.ಎಸ್. ಲೇಔಟ್‌ನಲ್ಲಿರುವ ಮೂರು ಉದ್ಯಾನಗಳಲ್ಲಿ ಮೊದಲನೆಯದು (ಬಸ್ ಸ್ಟಾಪ್ ಬಳಿ) ಸರಿಯಾದ ರೀತಿಯ ಮೇಲ್ವಿಚಾರಣೆ ವ್ಯವಸ್ಥೆಯಿಂದ ಕೂಡಿದೆ. ನಾನು, ಸ್ನೇಹಿತರು ಸುಮಾರು ಐದು ವರ್ಷಗಳಿಂದ ಬೆಳಗಿನ ನಡಿಗೆಯಿಂದ ಈ ಪರಿಸರಕ್ಕೆ ಹೊಂದಿಕೊಂಡು ಆರೋಗ್ಯದಿಂದ್ದೇವೆ. ಇದಕ್ಕೆ ಹೊಂದಿಕೊಂಡಂತೆ ಇರುವ ಇನ್ನೂ ಎರಡು ಉದ್ಯಾನಗಳ ಸ್ಥಿತಿ ಮಾತ್ರ ಉತ್ತಮವಾಗಿಲ್ಲ.

ಅದೇ ಸಾಲಿನಲ್ಲಿ ಕೆಳಗೆ ಎರಡು ಉದ್ಯಾನವನಗಳ ಸುತ್ತಲೂ ಬೇಡದ ಮರಗಿಡಗಳು, ಮತ್ತಿತರ ಸಸ್ಯಗಳು ಬೆಳೆದು ಈ ಜಾಗವನ್ನು ಯಾರೂ ಉಪಯೋಗಿಸದಂತಾಗಿದೆ.

ಈ ಎರಡು ಉದ್ಯಾನಗಳ ಸಮಸ್ಯೆಗಳನ್ನು ಇಲ್ಲಿಯ ಬಿಬಿಎಂಪಿ ಸಿಬ್ಬಂದಿಯವರಿಗೂ, ನಗರಪಾಲಿಕೆ ಸದಸ್ಯರ ಗಮನಕ್ಕೂ ತರಲಾಗಿದೆ. ಆದರೆ ಈ ಕುರಿತು ಬಿಬಿಎಂಪಿ ಅಧಿಕಾರಿಗಳು ಆಸಕ್ತಿ ತೆಗೆದುಕೊಂಡಿಲ್ಲ. ಈ ಸಮಸ್ಯೆ ಇಂದು ನಿನ್ನೆಯದಲ್ಲ.

ಕಳೆದ ಎರಡು ಮೂರು ವರ್ಷಗಳಿಂದ ಇಲ್ಲಿ ಕೂರಲು ಸರಿಯಾದ ಕಲ್ಲಿನ ಬೆಂಚ್‌ಗಳಾಗಲೀ, ನಡೆಯಲು ಸೂಕ್ತ ಸಮತಟ್ಟು ಟ್ರ್ಯಾಕ್ ಆಗಲೀ ಇಲ್ಲ. ಸಂಬಂಧಪಟ್ಟವರು ಬೇಗ ಈ ಸಮಸ್ಯೆಗಳನ್ನು ಬಗೆಹರಿಸಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT