ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತ ಸಾಗುತ್ತಿದೆ ಸಭ್ಯತೆ?

Last Updated 25 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮಡಿಕೇರಿಯಿಂದ ಮಂಗಳೂರಿಗೆ ಹೋಗುವ ಮಾರ್ಗದಲ್ಲಿ ಅರಂತೋಡು ಎಂಬ ಗ್ರಾಮವಿದೆ. ನಾನು ಚಿಕ್ಕವನಿದ್ದಾಗ ಇಲ್ಲಿ ನಡೆದ ಒಂದು ಘಟನೆಯ ವಿವರ ಹೀಗಿದೆ: ಸಿ.ಎಂ. ಪೂಣಚ್ಚ ಅವರ ಪರವಾಗಿ ಮತಯಾಚನೆಗೆ ಸಭೆ ಏರ್ಪಾಡಾಗಿತ್ತು.

ಸಭೆ ನಡೆಯುತ್ತಿರುವಾಗಲೇ ಕೆ.ಕೆ. ಶೆಟ್ಟಿ ಅವರ ಪರ ಪ್ರಚಾರದ ಅಂಬಾಸಿಡರ್‌ ಕಾರು ಅಲ್ಲಿಗೆ ಬಂದು ನಿಂತಿತು. ವಾಹನದಲ್ಲಿದ್ದ ಪ್ರಚಾರಕರು ಧ್ವನಿವರ್ಧಕದ ಮೂಲಕ ‘ಐದು ನಿಮಿಷ ನಮಗೆ ಅವಕಾಶ ಕೊಡಿ, ನಾವು ಪ್ರಚಾರ ಮುಗಿಸಿ ಹೊರಡುತ್ತೇವೆ’ ಎಂದಾಗ ಪೂಣಚ್ಚ ಅವರ ಪರ ಪ್ರಚಾರ ಸಭೆಯ ಸಂಘಟಕರು, ಅವರ ಕೋರಿಕೆಯನ್ನು ಒಪ್ಪಿ ಐದು ನಿಮಿಷಗಳ ಕಾಲ ತಮ್ಮ ಸಭೆಯನ್ನು ಸ್ಥಗಿತಗೊಳಿಸಿದರು. ವಿರೋಧಿ ಬಣದವರನ್ನು ಗೌರವಿಸಿ ಅವಕಾಶ ನೀಡಿದರು.

ಇಂದಿನ ರಾಜಕಾರಣಿಗಳ ‘ಕಡಿ’, ‘ಕತ್ತರಿಸಿ’ ಎನ್ನುವ ನಡೆ ನುಡಿ, ಕಾರ್ಯಕರ್ತರ ಬೀದಿ ಕಾಳಗ ಕಂಡಾಗ ಈ ಘಟನೆಯ ನೆನಪನ್ನು ಹಂಚಿಕೊಳ್ಳಬೇಕೆನಿಸಿತು. ಎತ್ತ ಸಾಗುತ್ತಿದೆ ಸಭ್ಯತೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT