ಶಿವಮೊಗ್ಗ ಜಲ್ಲೆ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪನವರು ಶಿವಮೊಗ್ಗ ನಗರದಲ್ಲಿ ನಡೆಸಿದ ‘ಜನಸಂಪರ್ಕ ಹಾಗೂ ಸಾರ್ವಜನಿಕ ಕುಂದುಕೊರತೆ ಸಭೆ’ಯಲ್ಲಿ ಅಹವಾಲುದಾರರನ್ನು ಕುರಿತು ಏರಿದ ಧ್ವನಿಯಲ್ಲಿ ‘ಏಯ್ ಕೇಳಪ್ಪಾ ಇಲ್ಲಿ... ಏಯ್ ತಮ್ಮಾ...’ ಎಂದು ರೇಗಿದ್ದಾರೆ.

‘ಯಾರಪ್ಪಾ ಅಧಿಕಾರಿ... ಏಕೆ ಕೆಲಸ ಮಾಡ್ತಿಲ್ಲ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ (ಪ್ರ.ವಾ., ಜುಲೈ 23). ಸಚಿವರ ಕಳಕಳಿ ಶ್ಲಾಘನೀಯ. ಆದರೆ ಅಹವಾಲುದಾರರನ್ನು ಮತ್ತು ಅಧಿಕಾರಿಗಳನ್ನು ಏಕವಚನದಲ್ಲಿ ಸಂಬೋಧಿಸಿದ್ದು ಸರಿಯಲ್ಲ.

ಅದರ ಬದಲು ಬಹುವಚನ ಬಳಸಿದ್ದಿದ್ದರೆ ಸಚಿವರ ವ್ಯಕ್ತಿತ್ವಕ್ಕೆ ಮೆರುಗು ಬರುತ್ತಿತ್ತು. ಅಹವಾಲುದಾರರು ಹಾಗೂ ಅಧಿಕಾರಿಗಳಿಗೆ ಸಚಿವರ ಕುರಿತು ಇರುವ ಗೌರವ ದುಪ್ಪಟ್ಟಾಗುತ್ತಿತ್ತು. ಏಕವಚನ ಸಂಬೋಧನೆ ಕೇಳಲು ಹಿತಕರವಲ್ಲ. ಶೋಭೆಯೂ ಅಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.