ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡುವುದು ಯಾರ ಹಣ?

Last Updated 11 ಜನವರಿ 2017, 19:30 IST
ಅಕ್ಷರ ಗಾತ್ರ

‘ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಮಠಾಧೀಶರಿಗೆ ₹ 10 ಸಾವಿರ ಕೋಟಿ ಅನುದಾನ ಕೊಡುತ್ತೇವೆ’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ (ಪ್ರ.ವಾ., ಜ. 11). ಆದರೆ ಹೀಗೆ ಕೊಡಲು ಉದ್ದೇಶಿಸಿರುವುದು ಯಾರ ಹಣ ಎಂಬುದನ್ನು ಅವರು ಸ್ಪಷ್ಟವಾಗಿ ತಿಳಿಸಬೇಕು.

ಈ ರೀತಿಯ ಹೇಳಿಕೆಗಳ ಹಿಂದಿನ ಉದ್ದೇಶ ರಾಜ್ಯದ ಸಾಕ್ಷರರಿಗೆಲ್ಲ ಅರ್ಥವಾಗುತ್ತದೆ. ಕರುನಾಡಿನ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಈಶ್ವರಪ್ಪನವರು ತಮ್ಮ ಪ್ರಣಾಳಿಕೆ ರೂಪಿಸಲಿ. ಸರ್ಕಾರದಿಂದ ಅವರು ಹಣ ನೀಡುವುದಾಗಿ ಹೇಳಿದರೆ ಅದು ರಾಜ್ಯದ ಜನರ ಹಣ. ಮಠಾಧೀಶರಿಗೆ ಕೋಟ್ಯಂತರ ರೂಪಾಯಿ ಅನುದಾನ ನೀಡಲೇಬೇಕೆಂದಿದ್ದರೆ ತಮ್ಮ ಸಂಘಟನೆಯಿಂದ ನೀಡಲಿ.
-ಮಹೇಶ್, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT