`ಕೆ.ಪಿ.ಎಸ್.ಸಿ. ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ಮರು ಚಿಂತಿಸಲಿ~ ಶೀರ್ಷಿಕೆಯಡಿಯ (ವಾ.ವಾ. ಅ. 18) ಅಶೋಕ ಎ.ಸಿ. ಇವರ ಪತ್ರಕ್ಕೆ ಆಯೋಗವು ಈ ಸ್ಪಷ್ಟೀಕರಣ ನೀಡಿದೆ:

`ಸೇವೆಯಲ್ಲಿರುವ ಸರ್ಕಾರಿ ನೌಕರರು ಸಿವಿಲ್ ಸೇವೆಯ ಯಾವುದೇ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ, ಅಂತಹ ಅಭ್ಯರ್ಥಿಯು ತನ್ನ ಅರ್ಜಿಯನ್ನು ತನ್ನ ನೇಮಕಾತಿ ಪ್ರಾಧಿಕಾರದ ಮೂಲಕ ಸಲ್ಲಿಸತಕ್ಕದ್ದೆಂದು, ಕರ್ನಾಟಕ ಸಿವಿಲ್ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮಗಳಲ್ಲಿ 1977ರ ಉಪನಿಯಮ-11 ರಲ್ಲಿ ನಿರ್ದಿಷ್ಟಪಡಿಸಿರುತ್ತದೆ~.

ಈ ಮೇಲ್ಕಂಡ ನಿಯಮದನ್ವಯ ಅಭ್ಯರ್ಥಿಗಳು ಅರ್ಜಿಯನ್ನು ಇಲಾಖಾ ಮುಖಾಂತರ ಸಲ್ಲಿಸಬೇಕಿದ್ದು, ಆಯೋಗವು ಅರ್ಜಿಯನ್ನು ಆನ್-ಲೈನ್ ಮೂಲಕ ಆಹ್ವಾನಿಸಲಾಗಿದ್ದ ಕಾರಣ, `ಸೇವೆಯಲ್ಲಿರುವ ಅಭ್ಯರ್ಥಿಗಳು ಅವರು ಸೇವೆಯಲ್ಲಿರುವ ಬಗ್ಗೆ ಅರ್ಜಿಯಲ್ಲಿನ ನಿಗದಿತ ಅಂಕಣವನ್ನು ತುಂಬುತಕ್ಕದ್ದು.

ಅವರ ಸೇವಾ ಪ್ರಮಾಣ ಪತ್ರ ಮತ್ತು ಸದರಿ ಹುದ್ದೆಗೆ ಅರ್ಜಿ ಸಲ್ಲಿಸುವ ಬಗ್ಗೆ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ( No Objection Certificate) ಸಂಬಂಧಿತ ನೇಮಕಾತಿ ಪ್ರಾಧಿಕಾರದಿಂದ ದಿನಾಂಕ: 8.3.2011 ಅಥವಾ ವಿಸ್ತೃತ ದಿನಾಂಕ: 16.3.2011 ರಂದು ಪಡೆದಿಟ್ಟುಕೊಂಡಿರಬೇಕು~ ಎಂದು ದಿನಾಂಕ: 2.2.2011ರ ಅಧಿಸೂಚನೆಯ ಕಂಡಿಕೆ-13(2)(3) ರಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ.

ಮೂಲ ದಾಖಲೆಗಳ ಪರಿಶೀಲನೆಗೆ ಆಹ್ವಾನಿಸಿದ ಅಭ್ಯರ್ಥಿಗಳಿಗೆ ಕಳುಹಿಸಲಾದ ಪತ್ರದಲ್ಲಿ ಇದನ್ನು ಉಲ್ಲೇಖಿಸಿ ಅದರಂತೆ ಪ್ರಮಾಣ ಪತ್ರವನ್ನು ಸಲ್ಲಿಸುವಂತೆ ಸೂಚಿಸಲಾಗಿರುತ್ತದೆ. ಆದ್ದರಿಂದ ಈ ಬಗ್ಗೆ ಮರು ಚಿಂತನೆಯ ಅಗತ್ಯ ಇರುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.