ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ-ಗುಲ್ಬರ್ಗಕ್ಕೆ ರೈಲು ಬಿಡಿ

Last Updated 24 ಫೆಬ್ರುವರಿ 2011, 16:50 IST
ಅಕ್ಷರ ಗಾತ್ರ

ಹೈದರಾಬಾದ್ ಕರ್ನಾಟಕ-ಉತ್ತರ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ರೈಲು ಇಷ್ಟು ವರ್ಷಗಳಾದರೂ ಇಲ್ಲದೇ ಇರುವುದು ಒಂದು ಕಠೋರ ವಾಸ್ತವವಾಗಿದೆ.

ಹುಬ್ಬಳ್ಳಿ-ಧಾರವಾಡ, ಗದಗ, ಕೊಪ್ಪಳ, ಹೊಸಪೇಟೆ, ಬಳ್ಳಾರಿ, ಗುಂತಕಲ್ಲು, ರಾಯಚೂರು, ಯಾದಗಿರಿ, ಗುಲ್ಬರ್ಗ ಮೊದಲಾದ ಕರ್ನಾಟಕದ ಪ್ರಮುಖ ನಗರಗಳನ್ನು ಸಂಪರ್ಕಿಸಲು ರೈಲು ವ್ಯವಸ್ಥೆ ಇಲ್ಲ.

ಈಗ ಹೋಗಬೇಕಾದವರು ಯಾದಗಿರಿಗೆ ಇಳಿದು ಒಂದು ತಾಸು ಇನ್ನೊಂದು ರೈಲಿಗಾಗಿ ದಾರಿ ಕಾಯಬೇಕು. ಇಲ್ಲದಿದ್ದರೆ ಬಸ್ಸುಗಳಲ್ಲಿ ಮೈಬೇನೆ ಮಾಡಿಕೊಂಡು ಸಾಗಬೇಕು.

ಧಾರ್ಮಿಕ ಕಾರಣಕ್ಕೆ ಗುಲ್ಬರ್ಗದ ಶರಣಬಸವೇಶ್ವರ ಗುಡಿಗೋ, ಬಂದೇ ನವಾಜ್ ದರ್ಗಾಕ್ಕೋ ಹೋಗುವವರ, ವಿಶ್ವವಿದ್ಯಾಲಯ, ಆಕಾಶವಾಣಿ, ವ್ಯಾಪಾರ, ವಹಿವಾಟು, ಕೋರ್ಟು, ಕಚೇರಿ ಕೆಲಸಕ್ಕಾಗಿ ಹೋಗುವ ಸಾವಿರಾರು ಜನ ಪಡುವ ಯಾತನೆ ದಿನ ನಿತ್ಯದ ದೃಶ್ಯ. ಈ ಎಲ್ಲ ಜನರು ಬಸ್ ಅಥವಾ ಬೇರೆ ವಾಹನಗಳನ್ನೇ ಅವಲಂಬಿಸಿರುವುದರಿಂದ ರಸ್ತೆ ಅಪಘಾತಗಳಿಗೆ ಒಳಗಾಗುತ್ತಿದ್ದಾರೆ.

ಆದ್ದರಿಂದ ಈ ಭಾಗದ ಲೇಖಕರು, ಕವಿಗಳು, ಕಲಾವಿದರು, ಬುದ್ದಿ ಜೀವಿಗಳು, ಸಾರ್ವಜನಿಕರು ಈ ಬೇಡಿಕೆಯನ್ನು ಬೆಂಬಲಿಸಬೇಕು. 

ಈ ರೈಲ್ವೆ ಬಜೆಟ್‌ನಲ್ಲಿಯೇ ಕೇಂದ್ರ ಸರ್ಕಾರವನ್ನು ಈ ಜನಪರ ಬೇಡಿಕೆಯನ್ನು ಈಡೇರಿಸಬೇಕೆಂದು ವಿನಂತಿಸುತ್ತೇವೆ. ಇದಕ್ಕಾಗಿ ಶಾಸಕರು, ಸಂಸದರೂ ಒತ್ತಾಯಿಸಬೇಕೆಂದು ವಿನಂತಿ.                                
 
- ರಹಮತ್ ತರೀಕೇರೆ, ಹೊಸಪೇಟೆ  ಅಲ್ಲಮಪ್ರಭು ಬೆಟ್ಟದೂರು, ಕೊಪ್ಪಳ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT