ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಕ್ಕಿಂತ ವ್ಯಕ್ತಿಯೇ ಮುಖ್ಯ!

Last Updated 8 ಜನವರಿ 2013, 19:59 IST
ಅಕ್ಷರ ಗಾತ್ರ

ಕಾಂಗ್ರೆಸ್‌ಗೆ `ಪಕ್ಷಕ್ಕಿಂತ ವ್ಯಕ್ತಿ ಮುಖ್ಯ'ವಾಗಿತ್ತು. ಆದ್ದರಿಂದಲೇ “ಪಕ್ಷದ ವಿರುದ್ಧ ನಿರ್ದಿಷ್ಟ ಆಪಾದನೆಗಳು ಇಲ್ಲದ ಹೊರತು ಖಾಸಗಿ ವ್ಯಕ್ತಿಗಳ ವ್ಯವಹಾರದ ನಡುವೆ ಕೇಂದ್ರ ಸರ್ಕಾರ ಮೂಗು ತೂರಿಸಲು ಸಾಧ್ಯವಿಲ್ಲ” ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರಷ್ಟೆ?

“ಪ್ರತಿಪಕ್ಷಗಳು ಏನೇ ಒತ್ತಾಯ ಮಾಡಿದರೂ ಅದಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ” ಎಂದು ಪ್ರಧಾನಮಂತ್ರಿಯವರೂ, ಜೊತೆಗೆ ಪಕ್ಷದ ರಕ್ಷಣೆಗೆ ಸಾಧ್ಯವಿರುವ ಎಲ್ಲಾ ಕ್ರಮಕೈಗೊಳ್ಳುವಂತೆ ಎಐಸಿಸಿ ಅಧ್ಯಕ್ಷರೂ ಸೂಚಿಸಿದ್ದಾರೆ.

ಆದರೆ ಬಿಜೆಪಿಗೆ ವ್ಯಕ್ತಿಗಿಂತ `ಪಕ್ಷ ಮುಖ್ಯ' ಎಂಬ ತತ್ವದೊಂದಿಗೆ ಪಕ್ಷದ ಪ್ರಥಮ ಮುಖ್ಯಮಂತ್ರಿ  ವಿರುದ್ಧದ ಆಪಾದನೆಗಳು ಅವರಿಗಷ್ಟೇ ಸಂಬಂಧಿಸಿದವು ಎಂದು ಪಕ್ಷದ ಹಲವು ಪೀಡಕರು ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಿಮುಖಗೊಳಿಸುವಲ್ಲಿ ಅವ್ಯಾಹತವಾಗಿ ಎಲ್ಲಾ ಪ್ರಯತ್ನವನ್ನು ಮಾಡಿದರು ಅಲ್ವೇ?

ಆದರೆ ಅದೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ವಿರುದ್ಧದ ಆಪಾದನೆಗಳ ರಕ್ಷಣೆಗೆ ಪಕ್ಷವೇ ಪಣ ತೊಟ್ಟು ಅವರನ್ನು ಆ ಸ್ಥಾನದಲ್ಲೆ ಮುಂದುವರಿಸಿ; `ಪಕ್ಷಕ್ಕಿಂತ ವ್ಯಕ್ತಿಯೇ ಮುಖ್ಯ' ಎಂದು ಸಾರಾಸಗಟಾಗಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಒಪ್ಪಿಕೊಂಡಂತೆ ಆಯಿತಲ್ಲ!
-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT