ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌: ಬೋಪಣ್ಣಗೆ ಬಾಲಾಜಿ ಅಥವಾ ಭಾಂಬ್ರಿ ಜೊತೆಗಾರ

Published 20 ಮೇ 2024, 22:30 IST
Last Updated 20 ಮೇ 2024, 22:30 IST
ಅಕ್ಷರ ಗಾತ್ರ

ನವದೆಹಲಿ : ಭಾರತದ ಅಗ್ರಗಣ್ಯ ಟೆನಿಸ್‌ ಡಬಲ್ಸ್ ಆಟಗಾರ ರೋಹನ್ ಬೋಪಣ್ಣ ಅವರಿಗೆ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಎನ್. ಶ್ರೀರಾಮ್ ಬಾಲಾಜಿ ಅಥವಾ ಯೂಕಿ ಭಾಂಬ್ರಿ ಅವರಲ್ಲೊಬ್ಬರು ಜೊತೆಗಾರ ಆಗಲಿದ್ದಾರೆ.

ತಂಡದ ಸಂಯೋಜನೆಯನ್ನು ಆಯ್ಕೆ ಸಮಿತಿ ನಿರ್ಧರಿಸುವುದಾದರೂ, ಬೋಪಣ್ಣ ಅವರ ಆಯ್ಕೆಗೆ ಎಐಟಿಎ ಒಪ್ಪಿಗೆ ನೀಡುವ ಸಾಧ್ಯತೆಯಿದೆ.

ಡಬಲ್ಸ್ ವಿಶ್ವ ಕ್ರಮಾಂಕದಲ್ಲಿ ಬೋಪಣ್ಣ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರು ಅಗ್ರ 10ರಲ್ಲಿ ಇರುವ ಕಾರಣ ನಿಯಮಗಳ ಪ್ರಕಾರ ತಮ್ಮ ಜೊತೆಗಾರರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ.

ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ ಡಬಲ್ಸ್‌ನ ಡ್ರಾ 32 ತಂಡಗಳನ್ನು ಒಳಗೊಂಡಿರುತ್ತದೆ.  ಅಲ್ಲಿ ಒಂದು ರಾಷ್ಟ್ರವು ಗರಿಷ್ಠ ಎರಡು ತಂಡಗಳನ್ನು ಮಾತ್ರ ಹೊಂದಲು ಅವಕಾಶವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT