ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್ ವ್ಯವಹಾರ ಕನ್ನಡದಲ್ಲಿರಲಿ

Last Updated 12 ಜನವರಿ 2012, 19:30 IST
ಅಕ್ಷರ ಗಾತ್ರ

ಕರ್ನಾಟಕದ ಎಲ್ಲಾ ಬ್ಯಾಂಕುಗಳಲ್ಲಿ ವ್ಯವಹಾರ ನಡೆಯುವುದು ಇಂಗ್ಲಿಷ್‌ನಲ್ಲಿ. ಇದು ಕನ್ನಡಿಗರು ನಾಚಿಕೆ ಪಟ್ಟುಕೊಳ್ಳುವಂತಹ ವಿಷಯ. ಜನರ ಮಾತೃ ಭಾಷೆಯಲ್ಲಿ ಎಲ್ಲಾ ವ್ಯವಹಾರಗಳು ನಡೆಯಬೇಕಾದುದು ನ್ಯಾಯ ಸಮ್ಮತ.
 
ಬ್ಯಾಂಕುಗಳ ಖಾತೆ ಆರಂಭದ ಅರ್ಜಿ, ಸಾಲದ ಅರ್ಜಿ, ಖಾತೆ ಪುಸ್ತಕ, ಹಣ ಕಟ್ಟುವ, ಪಡೆಯುವ ಎಲ್ಲ ಪತ್ರಗಳು ಇಂಗ್ಲಿಷ್‌ನಲ್ಲಿವೆ. ನಮ್ಮ ದೇಶದಲ್ಲಿ ಇಂಗ್ಲಿಷ್ ಓದಲು, ಬರೆಯಲು ಬಲ್ಲವರ ಪ್ರಮಾಣ ಕಡಿಮೆ. ಹೀಗಾಗಿ ಇಂಗ್ಲಿಷ್ ಬಾರದ ಹೆಚ್ಚಿನ ಸಂಖ್ಯೆಯ ಜನರು ಬ್ಯಾಂಕುಗಳ ವ್ಯವಹಾರಕ್ಕೆ ಬೇರೆಯವರನ್ನು ಅವಲಂಬಿಸುವುದನ್ನು ನಿತ್ಯ ಕಾಣಬಹುದು. ಈ ವ್ಯವಸ್ಥೆಯಿಂದ ಸಾವಿರಾರು ಜನಕ್ಕೆ ತೊಂದರೆಯಾಗಿದೆ.

ಕರ್ನಾಟಕದಲ್ಲಿರುವ ಎಲ್ಲಾ ಬ್ಯಾಂಕುಗಳು ಬ್ಯಾಂಕಿನ ಎಲ್ಲ ಕಾಗದ, ಪತ್ರ, ಅರ್ಜಿಗಳನ್ನು ಕನ್ನಡದಲ್ಲಿ ಮುದ್ರಿಸಿ ಅದರಲ್ಲಿ ಬ್ಯಾಂಕಿನ ವಹಿವಾಟುಗಳು ನಡೆಯುವಂತೆ ವ್ಯವಸ್ಥೆ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT