ಕರ್ನಾಟಕದಲ್ಲಿ `ರಾಜಕೀಯ ಅನೈತಿಕತೆ' ಪುನರಾರಂಭಗೊಂಡಿದೆ. ಹಿಂದೆ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ `ಆಪರೇಷನ್ ಕಮಲ' ಎಂಬ ನಿರ್ಲಜ್ಜ ಕಾರ್ಯಾಚರಣೆಯನ್ನು ಜಾರಿಗೆ ತರಲಾಯಿತು.

ರಾಜ್ಯದ ಇತಿಹಾಸದಲ್ಲಿ ಮೊದಲಿಗೆ ಇತರೆ ಪಕ್ಷಗಳವರನ್ನು ಆಮಿಷವೊಡ್ಡಿ ಸೆಳೆಯುವ ಅನೈತಿಕ ರಾಜಕೀಯ ಅಧ್ಯಾಯ ಆರಂಭಗೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಸ್ಥಿರಗೊಳಿಸಲಾಯಿತು. ವಿರೋಧ ಪಕ್ಷಗಳ ಅಸ್ತಿತ್ವಕ್ಕೇ ಆತಂಕ ಎದುರಾಯಿತು.

ಆಗ ಬೇರೆ ಪಕ್ಷಕ್ಕೆ ಹಾಗೂ ಸ್ಥಾನಮಾನಕ್ಕೆ ರಾಜೀನಾಮೆ ಇತ್ತು ಬಿಜೆಪಿಗೆ ಜಿಗಿದಿದ್ದರು. ಆದರೆ ಈಗ ಅದನ್ನೂ ಮೀರಿಸುವ `ರಾಜಕೀಯ ಅನೈತಿಕತೆ'ಯು ನಿರ್ಲಜ್ಜೆಯಿಂದ ಕಾಣತೊಡಗಿದೆ. ಬಿಜೆಪಿಯಿಂದ ಗೆದ್ದುಬಂದವರು ಯಾವ ನೈತಿಕತೆಯ ಅಂಜಿಕೆಯೂ ಇಲ್ಲದಂತೆ ಬಿ.ಎಸ್.ಯಡಿಯೂರಪ್ಪ ಅವರ ಕರ್ನಾಟಕ ಜನತಾ ಪಕ್ಷದಲ್ಲಿ ಗುರುತಿಸಿಕೊಳ್ಳಲಾರಂಭಿಸಿದ್ದಾರೆ.

ಬಿಜೆಪಿಗೆ ಹಾಗೂ ಬಿಜೆಪಿ ಮೂಲಕ ಹೊಂದಿರುವ ಸ್ಥಾನಮಾನಕ್ಕೆ ಮೊದಲು ರಾಜಿನಾಮೆ ಸಲ್ಲಿಸಿ ಆ ನಂತರ ಕೆ.ಜೆ.ಪಿ.ಜೊತೆಗೂಡಿದ್ದರೆ ಅವರ ಧೈರ್ಯವನ್ನು ಜನ ಮೆಚ್ಚುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.