ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಬಿಬಿಎಂಪಿ ಲಗ್ಗೆರೆ ವಾರ್ಡ್ ನಂ. 69ರಲ್ಲಿನ ಪ್ರತಿಯೊಂದು ಮುಖ್ಯರಸ್ತೆ ಮತ್ತು ಅಡ್ಡರಸ್ತೆಗೆ ಡಾಂಬರು ಹಾಕಿಸಲು ಮತ್ತು ಚರಂಡಿಗಳನ್ನು ನಿರ್ಮಾಣ ಮಾಡಲು ಸುಮಾರು ರೂ. 65 ಕೋಟಿ ರೂಪಾಯಿ ಅನುದಾನದೊಂದಿಗೆ ಕಾಮಗಾರಿಗಳನ್ನು ಕೈಗೊಂಡಿರುವುದು ಸಂತೋಷದ ಸುದ್ದಿ. ಆದರೆ ಲಗ್ಗೆರೆಯ ‘ಕೋಟಿಗೊಬ್ಬ ಡಾ. ವಿಷ್ಣುವರ್ಧನ್ ಮುಖ್ಯರಸ್ತೆ’ಯು ತುಂಬಾ ಕಿರಿದಾಗಿದ್ದು, ಈ ರಸ್ತೆಯಲ್ಲಿ ಲಘು ಮತ್ತು ಬಾರಿ ವಾಹನಗಳು ಸಂಚಾರ ಮಾಡಲು ತೊಂದರೆಯಾಗಿದೆ. ಬಿಎಂಟಿಸಿ ನಾಲ್ಕು ಮಾರ್ಗಗಳ ಎಲ್ಲಾ ಬಸ್ಸುಗಳು ಲಗ್ಗೆರೆಯ ನೂತನ ಬಸ್ಸು ನಿಲ್ದಾಣಕ್ಕೆ ಬಂದು ಹೋಗಲು ತೊಂದರೆಯಾಗಿದೆ.

ಈಗಲಾದರೂ ಸಂಬಂಧಪಟ್ಟವರು ಸೂಕ್ತ ಕ್ರಮಕೈಗೊಂಡು ಈ ಕಿರಿದಾದ ರಸ್ತೆಯನ್ನು ವಿಸ್ತರಿಸಿ, ಬಿಎಂಟಿಸಿ ಬಸ್ಸುಗಳು ಸುಲಭವಾಗಿ ಓಡಾಡುವ ರೀತಿಯಲ್ಲಿ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತಾರೆಂದು ಆಶಿಸೋಣವೇ?
–ಜಿ. ಸಿದ್ದಗಂಗಯ್ಯ

ಜಿ–8 ಬಸ್ ಬೇಕು
ಬಿಎಂಟಿಸಿಯು ಜಾಲಹಳ್ಳಿ, ಮತ್ತಿಕೆರೆ ಮಾರ್ಗವಾಗಿ ಶಿವಾಜಿನಗರ, ಎಂ.ಜಿ.ರಸ್ತೆ ತಲುಪುವ ಜಿ–8 ಬಸ್ ಸೌಲಭ್ಯವನ್ನು ಕಲ್ಪಿಸಬೇಕು. ಕಚೇರಿ ವೇಳೆ ಮತ್ತಿಕೆರೆಯಿಂದ ಹಾಗೂ ಸಂಜೆ ಎಂ.ಜಿ.ರಸ್ತೆಯಿಂದ ಮತ್ತಿಕೆರೆ ಮಾರ್ಗವಾಗಿ ಜಾಲಹಳ್ಳಿಗೆ ಸಂಪರ್ಕ ಕಲ್ಪಿಸುವ ಬಸ್ ಸಂಚಾರದ ಅಗತ್ಯವಿದೆ. ದಿನನಿತ್ಯ ನೂರಾರು ಮಂದಿ ಈ ಮಾರ್ಗದಲ್ಲಿ ಪ್ರಯಾಣಿಸುವುದರಿಂದ ಬಿಎಂಟಿಸಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ.
–ರಂಗಣ್ಣ, ಮತ್ತಿಕೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.