ಇಂದಿನ ಚಳವಳಿ, ಸತ್ಯಾಗ್ರಹಗಳಿಂದ ಯಾವುದೇ ಪ್ರಯೋಜನವಿಲ್ಲವೆಂದು ನಂಬಿದ್ದ ಜನಕ್ಕೆ ಚಳವಳಿ, ಸತ್ಯಾಗ್ರಹಗಳಿಂದ ಹೊಸ ನಿರೀಕ್ಷೆಯನ್ನು ಮೂಡಿಸುವ ಮೂಲಕ ಇಡೀ ದೇಶವನ್ನೇ ಒಗ್ಗೂಡಿಸುತ್ತಿರುವ ಅಣ್ಣಾ ಹಜಾರೆಯವರು ರಾಜಕೀಯ ಪ್ರವೇಶ ಮಾಡಲು ಕೈಗೊಂಡಿರುವ ನಿರ್ಧಾರ ಬೇಸರ ತರುವಂತಹದ್ದು.

ಹಾಗೇ ಅಣ್ಣಾ ತಂಡವು ಗೊಂದಲ, ಭಿನ್ನಾಭಿಪ್ರಾಯ ಹೊಂದಿದ್ದು, ಮೊದಲು ತಮ್ಮ ತಂಡವನ್ನು ಸರಿಪಡಿಸಿಕೊಳ್ಳುವುದು ಒಳಿತು. ಅಲ್ಲದೆ ಅಣ್ಣಾ ತಂಡದವರು ಒಂದಿಲ್ಲೊಂದು ಟೀಕೆ, ಆರೋಪಗಳಿಗೆ ಗುರಿಯಾಗುತ್ತಿದ್ದಾರೆ.

ಇನ್ನು ಅಣ್ಣಾ ಹಜಾರೆಯವರು ರಾಜಕೀಯ ಪ್ರವೇಶ ಮಾಡಿದರೆ ರಾಜಕೀಯ ವ್ಯಕ್ತಿಗಳು ಅಥವಾ ಅಣ್ಣಾ ತಂಡದ ವಿರೋಧಿಗಳು ಅವರನ್ನು ಸುಮ್ಮನೆ ಬಿಟ್ಟಾರೆಯೇ? ಒಂದಿಲ್ಲೊಂದು ಟೀಕೆ, ಆರೋಪಗಳನ್ನು ಮಾಡುತ್ತಾ ಅವರನ್ನು ರಾಜಕೀಯವಾಗಿ ಬಲಿಪಶು ಮಾಡುವ ಸಾಧ್ಯತೆ ಇದೆ. ಆದ್ದರಿಂದ ಅಣ್ಣಾ ಹಜಾರೆಯವರು ರಾಜಕೀಯ ಪ್ರವೇಶ ಮಾಡದಿರುವುದೇ ಒಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.