ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಧನೆಯಾಗಲಿ

Last Updated 5 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ವಾಪಸ್‌ ಮಾಡಿರುವ ಸಾಹಿತಿಗಳು ‘ಸಾಹಿತ್ಯ ಅಕಾಡೆಮಿಯು ತನ್ನನ್ನು ಮರುಶೋಧಿಸಿಕೊಳ್ಳಬೇಕು’ ಎಂದು ಅಕಾಡೆಮಿಗೆ ಪತ್ರ ಬರೆದಿದ್ದಾರೆ (ಪ್ರ.ವಾ., ನ. 2). ಭಾರತೀಯ ಭಾಷೆಗಳಲ್ಲಿನ ಸಾಹಿತ್ಯವನ್ನು ಪ್ರಚುರಪಡಿಸುವ ಉದ್ದೇಶಕ್ಕಾಗಿ ಸ್ಥಾಪಿಸಲಾಗಿರುವ ಈ ಸಂಸ್ಥೆಯು ನಮ್ಮ ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿನ ತಪ್ಪು ನಡೆಗಳನ್ನು ಪರಾಮರ್ಶಿಸಿ ತನ್ನ ಖಂಡನೆ ಮಂಡನೆಗಳನ್ನು ದಾಖಲಿಸುವ ಸಂಸ್ಥೆಯಾಗಬೇಕೆಂದು ಇವರು ಬಯಸುತ್ತಿದ್ದಾರೆ.

ಅಕಾಡೆಮಿ ತನ್ನನ್ನು ಮರುಶೋಧಿಸಿಕೊಳ್ಳಬೇಕೆಂದು ಬಯಸುತ್ತಿರುವ ಈ ಸಾಹಿತಿಗಳು, ಇದುವರೆಗೆ ಅಕಾಡೆಮಿಯ ಕೆಲಸ ಕಾರ್ಯಗಳಲ್ಲಿ ಸ್ವಇಚ್ಛೆಯಿಂದ ಎಷ್ಟು ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ ಎಂಬುದರ ಶೋಧನೆಯೂ ನಡೆಯಬೇಕಾಗಿದೆ. ನಮ್ಮ ಸಾಹಿತಿಗಳಲ್ಲಿ– ಪ್ರಶಸ್ತಿ ವಿಜೇತರೂ ಸೇರಿದಂತೆ– ಹೆಚ್ಚಿನವರು ಅಕಾಡೆಮಿಯ ಕೆಲಸ ಕಾರ್ಯಗಳಲ್ಲಿ ಸ್ವಇಚ್ಛೆಯಿಂದ ತೊಡಗಿಕೊಂಡಿರುವ ಉದಾಹರಣೆಗಳು ವಿರಳ.

ಉದಾಹರಣೆಗೆ ಅಕಾಡೆಮಿಯು ಐವತ್ತು ವರ್ಷಗಳಿಂದ ಪ್ರಕಟಿಸುತ್ತಿರುವ ‘ಇಂಡಿಯನ್‌ ಲಿಟರೇಚರ್‌’ (ಇಂಗ್ಲಿಷ್‌) ಮತ್ತು ‘ಸಮಕಾಲೀನ ಭಾರತೀಯ ಸಾಹಿತ್ಯ’ (ಹಿಂದಿ) ಎಂಬ ದ್ವೈಮಾಸಿಕಗಳಿಗೆ ಇವರಲ್ಲಿ ಎಷ್ಟುಜನ ಎಷ್ಟು ವರ್ಷಗಳ ಕಾಲ ಚಂದಾದಾರರಾಗಿದ್ದಾರೆ ಎಂದು ಶೋಧನೆ ನಡೆದರೆ ಆಸಕ್ತರಿಗೆ ಭ್ರಮನಿರಸನ ಆಗಬಹುದು. ಎರಡು ವರ್ಷಗಳ ಹಿಂದೆ ಬೆಂಗಳೂರಿನ ಮಧ್ಯಭಾಗದಲ್ಲಿರುವ ಒಂದು ಪ್ರತಿಷ್ಠಿತ ಕಾಲೇಜಿನೊಂದಿಗೆ ಸೇರಿ ಅಕಾಡೆಮಿಯು ಸಾಹಿತ್ಯ ಪತ್ರಿಕೆಗಳ ಬಗ್ಗೆ ಒಂದು ದಿನದ ವಿಚಾರ ಸಂಕಿರಣವನ್ನು ನಡೆಸಿತು. ಅದಕ್ಕೆ 400 ಜನರಿಗೆ ಅಮಂತ್ರಣ ಪತ್ರಿಕೆಗಳನ್ನು ಕಳಿಸಲಾಗಿತ್ತಂತೆ.

ಆದರೆ ಅಲ್ಲಿಗೆ ಬಂದಿದ್ದವರು, ಪ್ರಬಂಧ ಮಂಡಿಸಿದವರು  ಮತ್ತು ಗೋಷ್ಠಿಗಳ ಅಧ್ಯಕ್ಷತೆ ವಹಿಸಿದ್ದವರನ್ನೂ ಸೇರಿಸಿ ಇಪ್ಪತ್ತು–ಇಪ್ಪತ್ತೈದು ಜನರು ಮಾತ್ರ. ಸಾಹಿತಿಗಳಿಂದ ಮತ್ತು ಸಾಹಿತ್ಯಾಸಕ್ತರಿಂದ ಇಷ್ಟೆಲ್ಲಾ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಈ ಸಂಸ್ಥೆ ಇಂದು ಪ್ರಗತಿಪರರೆಂದು ಗುರುತಿಸಿಕೊಳ್ಳುವ ಒಂದು ವರ್ಗದ ಸಾಹಿತಿಗಳಿಗೆ ಮೋದಿ ನೇತೃತ್ವದ ಸರ್ಕಾರವನ್ನು ಹಣಿಯುವ ಕೆಲಸಕ್ಕೆ ಬಲಿಪಶುವಾಗಿ ಲಭ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT