ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಾಧಿಕಾರಿ ಧೋರಣೆ

Last Updated 17 ಜುಲೈ 2017, 19:30 IST
ಅಕ್ಷರ ಗಾತ್ರ

‘ಹಿಂದಿಯೂ ಇರಲಿ’ (ವಾ.ವಾ., ಜುಲೈ 17) ಎಂಬ ಅಭಿಪ್ರಾಯ ವಾಸ್ತವಕ್ಕೆ ದೂರವಾದುದು. ‘ಬೇರೆ ಕ್ಷೇತ್ರಗಳಲ್ಲಿ ಇಲ್ಲದ ತಕರಾರು ಮೆಟ್ರೊದಲ್ಲಿ ಮಾತ್ರ ಏಕೆ?’ ಎಂಬ ಇವರ ಪ್ರಶ್ನೆಯೇ ಹಾಸ್ಯಾಸ್ಪದವಾಗಿದೆ. ಹಿಂದಿ ಹೇರಿಕೆಯ ವಿರುದ್ಧ ಎತ್ತಿರುವ ಧ್ವನಿ ಮೆಟ್ರೊಗೆ ಮಾತ್ರ ಸೀಮಿತವಲ್ಲ.  ಬ್ಯಾಂಕಿಂಗ್ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ನಡೆದಿರುವ ಹೇರಿಕೆ ಎಂಬ ಭೂತದ ವಿರುದ್ಧ ಹೋರಾಟ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಜರುಗಿದೆ.

ಕೇಂದ್ರ ಸರ್ಕಾರದ ತ್ರಿಭಾಷಾ ಸೂತ್ರ ದಕ್ಷಿಣ ಭಾರತಕ್ಕೆ ಮಾತ್ರ ಮೀಸಲೋ ಅಥವಾ ಇದು ಉತ್ತರದ ರಾಜ್ಯಗಳಿಗೂ ಅನ್ವಯಿಸುತ್ತದೆಯೋ? ದಕ್ಷಿಣ ಭಾರತದಲ್ಲಿ ಅನಗತ್ಯ ಹಿಂದಿ ಹೇರುವ ಇವರು ಉತ್ತರ ಭಾರತದಲ್ಲೇಕೆ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಸೇವೆಗಳನ್ನು ಒದಗಿಸುವುದಿಲ್ಲ? ಯಾವುದೇ ಒಂದು ಭಾಷೆಯನ್ನು ಜನರು ಇಷ್ಟಪಟ್ಟು ಆರಿಸಿಕೊಳ್ಳಬೇಕೇ ಹೊರತು ಬಲವಂತವಾಗಿ ಒಂದು ಸಮುದಾಯದ ಮೇಲೆ ಅವರದಲ್ಲದ ಭಾಷೆಯನ್ನು ಹೇರುವುದು ಸರ್ವಾಧಿಕಾರಿ ಧೋರಣೆ.

-ಅಜಯ್ ಕುಮಾರ್,  ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT