ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಿ ತಂದ ಸಂಕಷ್ಟ

Last Updated 12 ನವೆಂಬರ್ 2015, 19:30 IST
ಅಕ್ಷರ ಗಾತ್ರ

‘ಕನ್ನಡದಲ್ಲಿ ಸಹಿ ಹಾಕಿ’ ಎಂಬ ಮಾತನ್ನು ರಾಜ್ಯದ ಶಿಕ್ಷಣ ಸಚಿವರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿಯವರೂ ಸೇರಿದಂತೆ ಹಲವರು ಹೇಳುತ್ತಿರುತ್ತಾರೆ. ಕಳೆದ ಇಪ್ಪತ್ತು- ಇಪ್ಪತ್ತೈದು ವರ್ಷಗಳಿಂದಲೂ ಕನ್ನಡದಲ್ಲೇ ಸಹಿ ಹಾಕುತ್ತ ಬಂದಿರುವ ನಾನು ಇದನ್ನು ಸ್ವಾಗತಿಸುತ್ತೇನೆ (ಕೆಲವರು ಇಂಗ್ಲಿಷ್‌ ಪತ್ರಕ್ಕೆ ಇಂಗ್ಲಿಷ್‌ನಲ್ಲಿ ಮತ್ತು ಕನ್ನಡ ಪತ್ರಕ್ಕೆ ಕನ್ನಡದಲ್ಲಿ ಸಹಿ ಹಾಕುತ್ತಾರೆ).

ಆದರೆ ನನ್ನ ಈ ಅಭ್ಯಾಸ ಒಮ್ಮೆ ನನ್ನನ್ನು ಗಾಸಿಗೊಳಿ ಸಿತು. ಜೀವವಿಮಾ ನಿಗಮದಿಂದ ನನಗೆ ಹಣ ಬರಬೇಕಿತ್ತು. ಕಚೇರಿಯಲ್ಲಿ ಒಂದು ಅರ್ಜಿ ಕೊಟ್ಟು ತುಂಬಲು ಹೇಳಿದರು. ಅದು ಇಂಗ್ಲಿಷ್‌ನಲ್ಲಿತ್ತು. ನಾನು ಅದರಲ್ಲಿದ್ದ ಎಲ್ಲ ಕಾಲಂಗಳನ್ನು ಇಂಗ್ಲಿಷ್‌ನಲ್ಲೇ ತುಂಬಿದೆ. ಆದರೆ ಸಹಿಯನ್ನು ಎಂದಿನಂತೆ ಕನ್ನಡದಲ್ಲೇ ಮಾಡಿದೆ.

ಈ ಕಾರಣಕ್ಕಾಗಿ ಅಲ್ಲಿನ ಸಿಬ್ಬಂದಿ ಹಣ ಸಂದಾಯ ಮಾಡಲು ನಿರಾಕರಿಸಿದ. ನನಗೆ ಎರಡು ಆಯ್ಕೆಗಳನ್ನು ಕೊಟ್ಟ. ಒಂದನೇ ಆಯ್ಕೆ ನಾನು ಇಂಗ್ಲಿಷಿನಲ್ಲಿ ಸಹಿ ಹಾಕಬೇಕು. ಎರಡನೆಯದು, ಯಾವುದಾದರೂ ಗೆಜೆಟೆಡ್ ಅಧಿಕಾರಿಯಿಂದ ಅರ್ಜಿ ಯನ್ನು ದೃಢೀಕರಿಸಿ ತರಬೇಕು. ಆತ ದೃಢೀಕರಿಸಬೇಕಾ ದದ್ದು ನನ್ನ ಗುರುತನ್ನಾಗಲಿ ಸಹಿಯನ್ನಾಗಲಿ ಅಲ್ಲ. ‘ಇಲ್ಲಿ ಇಂಗ್ಲಿಷ್‌ನಲ್ಲಿರುವ ಎಲ್ಲ ವಿವರಗಳನ್ನು ಆತನಿಗೆ ಓದಿ ಹೇಳಿ, ಅದನ್ನು ಅವನು ಅರ್ಥ ಮಾಡಿಕೊಂಡಿದ್ದಾನೆ ಎಂಬುದನ್ನು ನಾನು ಖಾತ್ರಿಪಡಿಸಿಕೊಂಡಿದ್ದೇನೆ’ ಎಂಬುದು.

ಅರ್ಜಿಯನ್ನು ಇಂಗ್ಲಿಷಿನಲ್ಲಿ ತುಂಬಿದ ನಾನು ಸಹಿ ಕನ್ನಡದಲ್ಲಿ ಹಾಕಿದ್ದಕ್ಕೆ  ಒಬ್ಬ ಗೆಜೆಟೆಡ್ ಅಧಿಕಾರಿಯ ಮರ್ಜಿ ಕಾಯುತ್ತಾ ಅವರ ಕಚೇರಿ ಮುಂದೆ  ನಿಲ್ಲಬೇಕಾ ಯಿತು. ಕನ್ನಡದ ಬಗೆಗೆ ಕಾಳಜಿ ಇರುವವರು ಇಂಥ ವಿಷಯಗಳಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತಾರೆಯೇ ಅಥವಾ ವೇದಿಕೆಯ ಮೇಲಷ್ಟೇ ಇವರ ಕಾಳಜಿಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT