ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಸೃಷ್ಟಿಯಲ್ಲ...

Last Updated 11 ಜುಲೈ 2013, 19:59 IST
ಅಕ್ಷರ ಗಾತ್ರ

`ಪ್ರಜಾವಾಣಿ'ಯಲ್ಲಿ ಮಾಂಸಾಹಾರ ನಿಷೇಧದ ಬಗ್ಗೆ ನಾನು ಉದಾಹರಿಸಿದ ಬಸವಣ್ಣನವರ ವಚನವು ಗದಗದ `ಶಾಬಾದಿಮಠ ಬುಕ್ ಡಿಪೊ ಪಬ್ಲಿಷರ್ಸ್‌' ಪ್ರಕಟಿಸಿದ `ಬಸವಣ್ಣನವರ ವಚನಗಳು' ಎಂಬ ಪುಸ್ತಕದಲ್ಲಿ 383ನೇ ಪುಟದಲ್ಲಿರುವ 1219ನೇ ವಚನವಾಗಿದೆ.

ಈ ವಚನಗಳನ್ನು ಸಂಗ್ರಹಿಸಿ ಅರ್ಥವಿವರಣೆಯನ್ನು `ಕವಿತಿಲಕ, ಕವಿರತ್ನ ನಾಟ್ಯಕವಿರಾಜ' ಎಚ್.ಟಿ. ಮಹಂತೇಶ ಶಾಸ್ತ್ರಿಗಳು ಮಾಡಿದ್ದಾರೆ. ಇದು ವೈದಿಕರು ಮಾಡಿದ ಸುಳ್ಳು ಸೃಷ್ಟಿಯಲ್ಲ. ಬಸವಣ್ಣನವರು ಹೇಳದಿದ್ದ ಸಂಗತಿಯನ್ನು ಅವರ ತಲೆಗೆ ಕಟ್ಟುವ ಕುತಂತ್ರವೂ ಇದಲ್ಲ. ಪೂರ್ವಗ್ರಹಪೀಡಿತರಾಗಿ ಲೇಖಕಿಯು ನನ್ನ ಮೇಲೆ ಇಂತಹ ಸುಳ್ಳು ಆರೋಪವನ್ನು ಮಾಡುವುದು ಸರಿಯಲ್ಲ ( ಪ್ರ.ವಾ. ಸಂಗತ, ಜುಲೈ 9)

ನಾನು ಆಗಸ್ಟ್ 1 ರಿಂದ ಸೆಪ್ಟೆಂಬರ್ 18ರವರೆಗೆ ಶ್ರೀ ಕೃಷ್ಣ ವಾದಿರಾಜ ಮಠ, ಪಿ.ಡಿ.ಜೆ. ಹೈಸ್ಕೂಲ್ ಹತ್ತಿರ, ಬಾಗಲಕೋಟೆ ರಸ್ತೆ, ಬಿಜಾಪುರ- ಇಲ್ಲಿ ಇರುತ್ತೇನೆ. ಭಾನುವಾರದ ಹೊರತು ಬೇರೆ ಯಾವುದೇ ದಿನದಲ್ಲಿ ಮಧ್ಯಾಹ್ನ 3 ಗಂಟೆಯ ನಂತರ 6 ಗಂಟೆಯೊಳಗೆ ಲೇಖಕಿಯು ನಮ್ಮನ್ನು ಭೇಟಿಆಗಬಹುದು.
-ವಿಶ್ವೇಶತೀರ್ಥ ಶ್ರೀಪಾದರು, ಉಡುಪಿ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT