ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಟ್ಟೆಗಿಲ್ಲ, ಬಟ್ಟೆಗಿಲ್ಲ...!

Last Updated 28 ಫೆಬ್ರುವರಿ 2018, 19:37 IST
ಅಕ್ಷರ ಗಾತ್ರ

‘ಅಲ್ಪಸಂಖ್ಯಾತರಲ್ಲಿ ವಿವಾಹದ ನಂತರದ ಕೌಶಲ ಹೆಚ್ಚು’ ಎಂಬುದಾಗಿ ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ವ್ಯಂಗ್ಯವಾಡಿದರೆ (ಪ್ರ.ವಾ., ಫೆ. 26), ‘ಕುಟುಂಬ ಕಲ್ಯಾಣ ಯೋಜನೆ ಹಿಂದೂಗಳಿಗೆ ಸೀಮಿತ, ಬೇರೆ ಧರ್ಮದವರು 10 ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ’ ಎಂದು ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ. ‘ಹಿಂದೂ ಯುವಕರು ಕನಿಷ್ಠ ಮೂರು ಮಕ್ಕಳನ್ನು ಹುಟ್ಟಿಸಬೇಕು’ ಎಂಬುದು ಕಲ್ಲಡ್ಕ ಪ್ರಭಾಕರ ಭಟ್ಟರ ಪ್ರಚೋದನೆ.

ಇವರೆಲ್ಲರೂ ದೇಶದ ವಾಸ್ತವ ಸ್ಥಿತಿಗೆ ಕಣ್ಣು ಮುಚ್ಚಿರುವಂತೆ ಕಾಣುತ್ತದೆ. ಇಲ್ಲಿ ಈಗಿರುವ ಮಕ್ಕಳಿಗೇ ‘ಹೊಟ್ಟೆಗಿದ್ದರೆ ಬಟ್ಟೆಗಿಲ್ಲ, ಬಟ್ಟೆಗಿದ್ದರೆ ಹೊಟ್ಟೆಗಿಲ್ಲ’ ಎಂಬ ಸ್ಥಿತಿ. ಲಕ್ಷಾಂತರ ಮಕ್ಕಳು ಮಹಾನಗರಗಳ ಕೊಳೆಗೇರಿಗಳಲ್ಲಿದ್ದು, ಚಿಂದಿ ಆರಿಸುವ ಕರಾಳ ದೃಶ್ಯ ಇವರ ಕಣ್ಣಿಗೆ ಬಿದ್ದಂತಿಲ್ಲ. ಯುನಿಸೆಫ್ ವರದಿ ಪ್ರಕಾರ, ದೆಹಲಿಯಲ್ಲಿ ಮನೆಯಿಲ್ಲದೆ ಬೀದಿಗೆ ಬಿದ್ದ ಮಕ್ಕಳ ಸಂಖ್ಯೆ ಒಂದು ಲಕ್ಷ. ಇದೇ ರೀತಿ ಪ್ರತಿರಾಜ್ಯ ರಾಜಧಾನಿಗಳಲ್ಲಿ ಲಕ್ಷೋಪಲಕ್ಷ ಮಕ್ಕಳು ಬೀದಿಗೆ ಬಿದ್ದು ಚಳಿ, ಮಳೆ, ಬಿಸಿಲುಗಳಿಗೆ ಮೈಯೊಡ್ಡಿ, ಚಿಂದಿ ಆರಿಸಿ ಜೀವ ಹಿಡಿದು ಬದುಕುತ್ತಿವೆ, ಕೆಲವು ಸಾಯುತ್ತಿವೆ. ಇದೆಲ್ಲ ನೋಡಿದಾಗ ‘ಇರುವ ಮಕ್ಕಳಿಗೆ ಎಣ್ಣೆಯಿಲ್ಲ, ಬೆಣ್ಣೆಯಿಲ್ಲ ಮತ್ತೇಕೆ ಮಕ್ಕಳು!’ ಎಂಬ ಪ್ರಶ್ನೆ ಎದುರಾಗುತ್ತದೆ. ಹೆಚ್ಚು ಮಕ್ಕಳನ್ನು ಹುಟ್ಟಿಸುವಂತೆ ಪ್ರಚೋದಿಸುವವರೆಲ್ಲಾ ಆ ಮಕ್ಕಳ ಲಾಲನೆ, ಪಾಲನೆ ಮಾಡಿ ಸಾಕುವರೇನು?

ಹೆಚ್ಚು ಮಕ್ಕಳನ್ನು ಹುಟ್ಟಿಸುವುದು ಹಾಗೂ ಅದಕ್ಕೆ ಪ್ರೋತ್ಸಾಹ ನೀಡುವುದು ಎಂದರೆ ಶಿಶು ಹತ್ಯಾ ದೋಷವಲ್ಲದೆ ಮತ್ತೇನೂ ಅಲ್ಲ. ಕೇಂದ್ರ ಸರ್ಕಾರಕ್ಕೆ ಇಚ್ಛಾಶಕ್ತಿ ಇರುವುದಾದರೆ, ಜಾತ್ಯತೀತ ರಾಷ್ಟ್ರದ ಮೌಲ್ಯಗಳ ಅನ್ವಯ, ಹಿಂದೂ ಆಗಲಿ ಮುಸ್ಲಿಂ ಆಗಲಿ ಕುಟುಂಬಕ್ಕೆ ‘ಎರಡು ಮಕ್ಕಳಿಗಿಂತ ಹೆಚ್ಚು ಕೂಡದು’ ಎಂದು ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಬೇಕು. ಸಂವಿಧಾನ ಬದ್ಧ ಮಾರ್ಗ ಇದೊಂದೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT