‘ಸುಮ್ನೇ ನಮ್ಮೇಲೆ ಗೂಬೆ ಕೂರಿಸ್ತಾರೇ...!’

7

‘ಸುಮ್ನೇ ನಮ್ಮೇಲೆ ಗೂಬೆ ಕೂರಿಸ್ತಾರೇ...!’

Published:
Updated:

ವಿಜಯಪುರ: ‘ಜನ ಎಲ್ರು ಕೊಟ್ಟಿದ್ದನ್ನೂ ತಗೊಳ್ತಾರೇ. ಆದ್ರೇ ವೋಟ್‌ ಯಾರಿಗೆ ಹಾಕಬೇಕೋ ಅವರಿಗೇ ಹಾಕೋದು. ರೀ... ಕಲ್ಲೂರ, ಈಗ ಚುನಾವಣೆಗೆ ನಿಂತ ಯಾರುತಾನೆ ಖರ್ಚ್‌ ಮಾಡಲ್ಲ ನೀವೇ ಹೇಳ್ರೀ...!’ ಜೆಡಿಎಸ್‌ ಮುಖಂಡ ಪಿ.ಜಿ.ಆರ್‌.ಸಿಂಧ್ಯಾ ಅವರ ಪ್ರಶ್ನೆಯಿದು.

ಮಾಜಿ ಸಚಿವ ಬಿ.ಎಂ.ಪಾಟೀಲ ಅವರ ಪುಣ್ಯಸ್ಮರಣೆ ಸಮಾರಂಭವನ್ನು ಶುಕ್ರವಾರ ವಿಜಯಪುರದಲ್ಲಿ ಆಯೋಜಿಸಲಾಗಿತ್ತು. ಆರಂಭದಲ್ಲಿ ಸ್ವಾಗತಕಾರರು, ಸಿಂಧ್ಯಾ ಅವರು ನಡೆದುಬಂದ ಹಾದಿಯನ್ನು ವಿವರಿಸುತ್ತ, ಚುನಾವಣಾ ವ್ಯವಸ್ಥೆಯಲ್ಲಿ ‘ಹಣ ಬಲ’ ಎಂಬುದನ್ನು ಪ್ರಸ್ತಾಪಿಸಿದ್ದರು. ಇದಕ್ಕೆ ಉತ್ತರವೆಂಬಂತೆ ಸಿಂಧ್ಯಾ ಅವರು ಮೇಲಿನ ಮಾತುಗಳನ್ನಾಡಿದರು.

‘ಚುನಾವಣೆಗೆ ನಿಂತ ಎಲ್ರೂ ಖರ್ಚು ಮಾಡ್ತಾರೆ. ನಾವು ನಮ್ಮ ತಪ್ಪುಗಳಿಂದ ಸೋಲುತ್ತೇವೆಯೇ ವಿನಾಜನರಿಂದಲ್ಲ. ನಾನು ಆರು ಬಾರಿ ಶಾಸಕನಾಗಿರುವೆ. ನಾನು ಪ್ರತಿನಿಧಿಸಿದ ಕ್ಷೇತ್ರದಲ್ಲಿ ಮರಾಠರ ಸಂಖ್ಯೆ ಕಡಿಮೆ. ಆದ್ರೂ ಗೆಲ್ತಿದ್ದೆ. ಅಲ್ಲೇ ಸೋಲನ್ನೂ ಕಂಡಿದ್ದೇನೆ. ಸೋತಿದ್ದಕ್ಕೆ ಜನರಲ್ಲ, ನಮ್ಮ ತಪ್ಪುಗಳು ಕಾರಣ’ ಎನ್ನುತ್ತಿದ್ದಂತೆ ಸಭಾಂಗಣದಲ್ಲಿ ನೆರೆದಿದ್ದ ಕೆಲವರು ಹೌದೌದು ಎಂದು ತಲೆಯಾಡಿಸಿದರು.

‘ಸಿಂಧ್ಯಾ ಸಾಹೇಬ್ರು ಖರೇ ಹೇಳಿದ್ರು ನೋಡ್ರೀ. ನಮ್ಮಲ್ಲಿ ಮಾತ್ರ ಜನರ ಮೇಲೆ ಸುಮ್ನೇ ಗೂಬೆ ಕೂರಿಸ್ತಾರೆ’ ಎಂದು ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲರ ಬೆಂಬಲಿಗರು ಮುಗುಳ್ನಕ್ಕರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !