ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಮೊದಲ ವೈದ್ಯೆ 'ಆನಂದಿ ಗೋಪಾಲ್‌ ಜೋಷಿ' ಜನುಮದಿನ

Last Updated 31 ಮಾರ್ಚ್ 2018, 5:57 IST
ಅಕ್ಷರ ಗಾತ್ರ

ಬೆಂಗಳೂರು: ಕೈಯಲ್ಲಿ ಪದವಿ ಪತ್ರ, ಕೊರಳಲ್ಲಿ ಸ್ಟೆತೋಸ್ಕೋಪ್ ಧರಿಸಿರುವ ಸೀರೆಯುಟ್ಟ ಮಹಿಳೆ. ಇದು ಗೂಗಲ್‌ ಡೂಡಲ್‌ನಲ್ಲಿ ಪ್ರಕಟಗೊಂಡಿರುವ ಚಿತ್ರ. ಈ ಚಿತ್ರದಲ್ಲಿರುವವರು ಭಾರತದ ಮೊದಲ ವೈದ್ಯೆ ಆನಂದಿ ಗೋಪಾಲ್‌ ಜೋಷಿ.

ಮಹಾರಾಷ್ಟ್ರದ ಕಲ್ಯಾಣದಲ್ಲಿ 1865ರಂದು ಜನಿಸಿದ ಆನಂದಿ ಅವರ 153ನೇ ಜನ್ಮದಿನಕ್ಕೆ ಗೂಗಲ್‌ ಡೂಡಲ್‌ ಮೂಲಕ ಗೌರವಿಸಿದೆ.

ಭಾರತದಲ್ಲಿ ಅನೇಕ ಕಟ್ಟುಪಾಡುಗಳ ನಡುವೆ ಮಹಿಳೆ ಶಾಲೆಗೆ ಹೋಗುವುದೂ ಕಠಿಣವಾಗಿದ್ದ 19ನೇ ಶತಮಾನದಲ್ಲಿ ವಿದೇಶದಲ್ಲಿ ವೈದ್ಯಕೀಯ ಪದವಿ ಪಡೆದು ದೇಶದ ಮೊದಲ ವೈದ್ಯೆ ಎಂಬ ಹೆಮ್ಮೆಗೆ ಪಾತ್ರರಾದವರು ಆನಂದಿ ಗೋಪಾಲ್‌ ಜೋಷಿ.

ಬೆನ್ನಿಗೆ ನಿಂತ ಪತಿ ಗೋಪಾಲ್‌ರಾವ್‌

ತನ್ನ 9ನೇ ವಯಸ್ಸಿನಲ್ಲಿಯೇ ಬಾಲ್ಯ ವಿವಾಹವಾದ ಆನಂದಿ ಅವರ ಬೆಂಬಲಕ್ಕೆ ನಿಂತವರು ಪತಿ ಗೋಪಾಲ್‌ರಾವ್‌ ಜೋಷಿ. ಅಂಚೆ ಇಲಾಖೆಯಲ್ಲಿ ಕ್ಲರ್ಕ್‌ ಆಗಿದ್ದ ಗೋಪಾಲ್‌ರಾವ್‌ ಆನಂದಿಗಿಂತ ವಯಸ್ಸಿನಲ್ಲಿ 20 ವರ್ಷ ಹಿರಿಯ. ಪ್ರಗತಿಪರ ಚಿಂತನೆಯನ್ನು ಹೊಂದಿದ್ದ ಅವರು ಆನಂದಿಗೆ ಶಿಕ್ಷಣ ಕೊಡಿಸುವಲ್ಲಿ ಪ್ರಮುಖಪಾತ್ರ ವಹಿಸಿದರು. ಇಂಗ್ಲಿಷ್‌, ಸಂಸ್ಕೃತ ಹಾಗೂ ಮರಾಠಿ ಭಾಷೆ ಓದುವುದು–ಬರೆಯುವುದನ್ನು ಅವರೇ ಕಲಿಸಿದರು.

ಕಲಿಕೆಯ ಫಲವಾಗಿ ತನ್ನ ಮುಂದಿನ ಗುರಿಯನ್ನು ಕಂಡುಕೊಂಡ ಆನಂದಿ ವೈದ್ಯಕೀಯ ಶಿಕ್ಷಣ ಪಡೆಯಲು ಅಮೆರಿಕಕ್ಕೆ ತೆರಳಿದರು. ಆಗ ಆಕೆಗೆ 19 ವರ್ಷ. ಪದವಿ ಪಡೆದು 1886ರಲ್ಲಿ ಭಾರತಕ್ಕೆ ಮರಳಿದ ಆನಂದಿ ಕೊಲ್ಲಾಪುರದ ಆಲ್ಬರ್ಟ್‌ ಎಡ್ವರ್ಡ್‌ ಆಸ್ಪತ್ರೆಯಲ್ಲಿ ಮಹಿಳಾ ರೋಗಿಗಳ ವಿಭಾಗದ ಮುಖ್ಯಸ್ಥೆಯಾಗಿ ವೈದ್ಯಕೀಯ ವೃತ್ತಿ ಪ್ರಾರಂಭಿಸಿದರು. 

ವೃತ್ತಿ ಆರಂಭಿಸಿದ ಒಂದೇ ವರ್ಷದಲ್ಲಿ ಕ್ಷಯರೋಗದಿಂದಾಗಿ1887ರ ಫೆ.26ರಂದು ಮೃತಪಟ್ಟರು. ಆಗ ಆನಂದಿ ಅವರಿಗೆ 22 ವರ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT