ಅಮೆರಿಕದ ವಲಸೆ ಕೇಂದ್ರಗಳಲ್ಲಿ 100 ಭಾರತೀಯರ ಬಂಧನ

7
ಅಮೆರಿಕ ನೀತಿ: ಮುಂದುವರಿದ ಗೊಂದಲ,

ಅಮೆರಿಕದ ವಲಸೆ ಕೇಂದ್ರಗಳಲ್ಲಿ 100 ಭಾರತೀಯರ ಬಂಧನ

Published:
Updated:

ವಾಷಿಂಗ್ಟನ್‌  (ಪಿಟಿಐ): ದಕ್ಷಿಣ ಗಡಿಭಾಗದ ಮೂಲಕ ಅಕ್ರಮವಾಗಿ ಪ್ರವೇಶಿಸಿದ ಸುಮಾರು 100 ಮಂದಿ ಭಾರತೀಯರನ್ನು ಅಮೆರಿಕದ ಎರಡು ವಲಸೆ ಕೇಂದ್ರಗಳಲ್ಲಿ ಬಂಧನದಲ್ಲಿ ಇರಿಸಲಾಗಿದೆ. ಬಂಧಿತರಲ್ಲಿ ಹೆಚ್ಚಿನವರು ಪಂಜಾಬಿನವರು. 

ಅಮೆರಿಕದಲ್ಲಿನ ಭಾರತೀಯ ದೂತಾವಾಸ ಕಚೇರಿಯ ಅಧಿಕಾರಿಗಳು ಎರಡೂ ಕೇಂದ್ರಗಳ ಅಧಿಕಾರಿಗಳ ಜೊತೆಗೆ ಸಂಪರ್ಕ ಸಾಧಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ದಕ್ಷಿಣ ಅಮೆರಿಕದ ನ್ಯೂ ಮೆಕ್ಸಿಕೊ ಪಟ್ಟಣದ ಕೇಂದ್ರವೊಂದರಲ್ಲಿ 40 ರಿಂದ 45 ಮಂದಿ ಬಂಧನದಲ್ಲಿದ್ದಾರೆ. ಅದೇ ರೀತಿ  ಒರೆಗಾನ್‌ನಲ್ಲಿ 52 ಮಂದಿಯಿದ್ದು, ಈ ಪೈಕಿ ಕ್ರೈಸ್ತರು ಹಾಗೂ ಸಿಖ್ಖರೇ ಹೆಚ್ಚಿನವರು. 

‘ದೂತಾವಾಸದ ಅಧಿಕಾರಿಗಳು ಈಗಾಗಲೇ ಸಂಪರ್ಕ ಸಾಧಿಸಿದ್ದು, ಅಧಿಕಾರಿಯೊಬ್ಬರು ಒರೆಗಾನ್‌ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ಮತ್ತೊಬ್ಬ ಅಧಿಕಾರಿ ನ್ಯೂ ಮೆಕ್ಸಿಕೊಗೆ ತೆರಳಲಿದ್ದಾರೆ. ಪರಿಸ್ಥಿತಿಯ ಬಗ್ಗೆ ನಾವು ಪರಾಮರ್ಶೆ ನಡೆಸುತ್ತಿದ್ದೇವೆ’ ಎಂದು ಭಾರತದ ರಾಯಭಾರ ಕಚೇರಿ ಹೇಳಿಕೆ ಬಿಡುಗಡೆಗೊಳಿಸಿದೆ.

‘ಅಕ್ರಮವಾಗಿ ಪ್ರವೇಶಿಸಿದ ಸಾವಿರಾರು ಮಂದಿ ಅಮೆರಿಕದ ವಿವಿಧ ಜೈಲುಗಳಲ್ಲಿ ಬಂಧಿಯಾಗಿದ್ದು, ಈ ಪೈಕಿ ಹೆಚ್ಚಿನವರು ಪಂಜಾಬ್‌ಗೆ ಸೇರಿದವರು’ ಎಂದು ಉತ್ತರ ಅಮೆರಿಕದ ಪಂಜಾಬಿ ಒಕ್ಕೂಟದ (ಎನ್‌ಎಪಿಎ) ಮುಖ್ಯಸ್ಥ ಸತ್ನಾಂ ಸಿಂಗ್‌ ತಿಳಿಸಿದ್ದಾರೆ.

2013 ರಿಂದ 2015ರ ತನಕ ಅಮೆರಿಕ ಗಡಿಯೊಳಗೆ 27 ಸಾವಿರ ಮಂದಿ ಭಾರತೀಯರು ಅಕ್ರಮವಾಗಿ  ಪ್ರವೇಶಿಸಿದ್ದಾರೆ. ಈ ಪೈಕಿ 4 ಸಾವಿರ ಮಹಿಳೆಯರು  ಹಾಗೂ 350 ಮಕ್ಕಳು ಸೇರಿದ್ದಾರೆ ಎಂದು ಎನ್‌ಎಪಿಎ ಸಂಘಟನೆಯು ಸರ್ಕಾರದಿಂದ ಪಡೆದ ಮಾಹಿತಿಯನ್ನು ಬಹಿರಂಗಪಡಿಸಿದೆ.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !